ಬಾಗಲಕೋಟೆ: ಜಿಲ್ಲೆಯಲ್ಲಿ ಒಟ್ಟು 21 ಕೊರೊನಾ ಸೋಂಕಿತರಲ್ಲಿ ಒಬ್ಬ ವೃದ್ದ ಮಾತ್ರ ಮೃತಪಟ್ಟಿದ್ದು, ಇದೀಗ ಇಬ್ಬರು ರೋಗಿಗಳ ಪರೀಕ್ಷೆಯಲ್ಲಿ ನೆಗೆಟಿವ್ ರಿಸಲ್ಟ್ ಬಂದಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
ಸ್ಕಾಬ್ ಪರೀಕ್ಷೆಯಲ್ಲಿ ಇಬ್ಬರದು ನೆಗಟಿವ್ ಬಂದಿದ್ದು, ಇವರನ್ನು ಮತ್ತೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಆದರೆ, ಬಿಡುಗಡೆ ಆಗಿರುವ ವ್ಯಕ್ತಿಗಳಿಗೆ ಯಾವುದೇ ರೀತಿಯಲ್ಲಿ ಕೊರೊನಾ ವೈರಸ್ ಲಕ್ಷಣ ಕಂಡು ಬಂದಿಲ್ಲ ಎಂಬುದೇ ವಿಶೇಷವಾಗಿದೆ.
ಒಟ್ಟಿನಲ್ಲಿ ಆತಂಕಗೊಂಡಿರುವ ಜಿಲ್ಲೆಯಲ್ಲಿ ಈ ಇಬ್ಬರು ವ್ಯಕ್ತಿಗಳ ರಕ್ತ ಪರೀಕ್ಷೆ ಮಾದರಿ ನೆಗಟಿವ್ ಬಂದಿರುವುದು ಸ್ವಲ್ಪ ಸಮಾಧಾನವನ್ನಂತೂ ತಂದಿದೆ.