ETV Bharat / state

ವ್ಯರ್ಥ ಆಗಬಾರದೆಂದು ಮೋದಿ ವ್ಯಾಕ್ಸಿನ್‌ ಬೇರೆ ದೇಶಗಳಿಗೆ ಕಳುಹಿಸಿದರು.. ಶಾಸಕ ಚರಂತಿಮಠ

ನಾವು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ‌ಮೂಡಿಸುವ ಕಾರ್ಯ ಮಾಡುವುದರ ಜೊತೆಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಜನರು ಎಚ್ಚೆತ್ತುಕೊಂಡಿಲ್ಲ. ಜ್ವರ, ನೆಗಡಿ, ಕೆಮ್ಮು ಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು..

veeranna-charantimata
ಶಾಸಕ ವೀರಣ್ಣ ಚರಂತಿಮಠ
author img

By

Published : May 19, 2021, 5:48 PM IST

ಬಾಗಲಕೋಟೆ : ಕೋವಿಡ್ ರೋಗವನ್ನು ಹತೋಟಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕಷ್ಟು ಕೆಲಸ ಮಾಡುತ್ತಿದ್ದರೂ ಕಾಂಗ್ರೆಸ್ ಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದ್ದಾರೆ.

ನವನಗರದ ಪ್ರೆಸ್​ ಕ್ಲಬ್​ನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಮೋದಿ ಅವರ ವಿರುದ್ದ ಮಾತನಾಡುವುದೇ ಕೆಲಸವಾಗಿದೆ. ಅವರ ತವರೂರು ಇಟಲಿಯಲ್ಲಿ ಕೊರೊನಾದಿಂದ ಬೀದಿ ಬೀದಿಗಳಲ್ಲಿ ಬಿದ್ದು ಮೃತ ಪಡುತ್ತಿರುವುದು ನೋಡಿದ್ದೆವು.

ಆದರೆ, ಇಡೀ ದೇಶದಲ್ಲಿ 130 ಕೋಟಿ ಜನತೆಗೆ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಸಜ್ಜಾಗುತ್ತಿದ್ದಂತೆ, ಇದು ಬಿಜೆಪಿ ವ್ಯಾಕ್ಸಿನ್​, ಮೋದಿ ವ್ಯಾಕ್ಸಿನ್​ ಎಂದು ಅಪಪ್ರಚಾರ ಮಾಡಿದರು.

ಆಗ ಮೋದಿ ಅವರು ವ್ಯರ್ಥ ಆಗಬಾರದು ಎಂದು ಬೇರೆ ದೇಶಕ್ಕೆ ರವಾನಿಸಿದರು. ಈಗ ಇಲ್ಲಿ ಸರಿಯಾಗಿ ಸಿಗಲಿಲ್ಲ ಎಂಬ ಕಾರಣಕ್ಕೆ ನಮ್ಮ ದೇಶಕ್ಕೆ ಬಿಟ್ಟು ಬೇರೆ ದೇಶಕ್ಕೆ ಕಳಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ಆರೋಪದ ಬಗ್ಗೆ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು

ಇಡೀ ಜಗತ್ತು ಭಾರತದಲ್ಲಿ ತಯಾರಿಸುವ ಲಸಿಕೆ ಬಗ್ಗೆ ಹೆಮ್ಮ ಪಡುತ್ತಿದೆ. ಅದಕ್ಕಾಗಿ ಬೇರೆ ದೇಶದವರು, ಎಲ್ಲಾ ಸಹಾಯ ಮಾಡಲು ಭರವಸೆ ನೀಡುತ್ತಿದ್ದಾರೆ. ಈಗ ಕೊರೊನಾ ರೋಗ ಗುಣಪಡಿಸಲು ಸಾಕಷ್ಟು ಲಸಿಕೆ, ಔಷಧ ಬರುತ್ತಿದೆ.

ರಷ್ಯಾದಿಂದ ಔಷಧ ಬರುತ್ತಿದೆ. ಇನ್ನೂ ಅನೇಕ ದೇಶದಿಂದ ಔಷಧ ಆಮದು ಮಾಡಿಕೊಂಡು ಜುಲೈನಿಂದ ಅಕ್ಟೋಬರ್​ವರೆಗೆ ಎಲ್ಲರಿಗೂ ಔಷಧ ನೀಡಬೇಕು ಎಂದು ನಿರ್ಣಯ ಮಾಡಿದ್ದಾರೆ ಎಂದು ತಿಳಿಸಿದರು.

ನಾವು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ‌ಮೂಡಿಸುವ ಕಾರ್ಯ ಮಾಡುವುದರ ಜೊತೆಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಜನರು ಎಚ್ಚೆತ್ತುಕೊಂಡಿಲ್ಲ. ಜ್ವರ, ನೆಗಡಿ, ಕೆಮ್ಮು ಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು.

ಆದರೆ, ಮೊದಲು ನಿರ್ಲಕ್ಷ್ಯ ಮಾಡಿ ತೀವ್ರವಾದ ಬಳಿಕ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಆಗ ಸಾವಿನ ಪ್ರಮಾಣ ಹೆಚ್ಚಾಗುತ್ತದೆ. ಜ್ವರ, ನೆಗಡಿ, ಕೆಮ್ಮಿಗಾಗಿ ನಮ್ಮ ಸಂಘದ ವತಿಯಿಂದ ಮಾತ್ರೆಗಳ 11 ಸಾವಿರ ಕಿಟ್ ತಯಾರಿಸಿ, ವಿತರಣೆ ಮಾಡಲಾಗುತ್ತದೆ. ಆದರೆ, ಸರಿಯಾಗಿ ಉಪಯೋಗ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಪ್ರಧಾನಿ ದತ್ತಾತ್ರೇಯನ ದರ್ಶನ ಮಾಡಿದರೆ ಕೊರೊನಾ ನಿಯಂತ್ರಣ : ರಾಜಗುರು ದ್ವಾರಕಾನಾಥ್ ಗುರೂಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.