ಬಾಗಲಕೋಟೆ : ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರ ಅವರು ನಗರದ ಹಳೆ ಎಪಿಎಂಸಿ ಬಳಿಯ ಕುಷ್ಠ ರೋಗಿಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಆಹಾರ ಧಾನ್ಯ ವಿತರಣೆ ಮಾಡಿದರು.
ಕೊರೊನಾ ವೈರಸ್ನಿಂದ ಕಷ್ಟದಲ್ಲಿರುವ ಕುಷ್ಠ ರೋಗಿಗಳಿಗೆ ತೊಂದರೆಯಾಗಿತ್ತು. ಸರಿಯಾದ ಸೌಲಭ್ಯ ಹಾಗೂ ಆಹಾರ ಸಾಮಾಗ್ರಿ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿತ್ಯ ಬೇಕಾಗುವ ಅಗತ್ಯ ವಸ್ತುಗಳನ್ನು ವಿತರಿಸಿದರು.
ವೀಣಾ ಕಾಶಪ್ಪನವರ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ಹಾಗೂ ಇತರ ಕಾರ್ಯಕರ್ತರ ಜೊತೆಗೆ ಆಹಾರ ವಿತರಣೆ ಮಾಡಿದರು.