ETV Bharat / state

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರವಾಹ ವೀಕ್ಷಣೆಯಲ್ಲೂ ದ್ವೇಷದ ರಾಜಕೀಯ ಆರೋಪ.. - kannadanews

ಪ್ರವಾಹಕ್ಕೆ ತುತ್ತಾಗಿ ನಲುಗಿದ್ದ ಬಾಗಲಕೋಟೆಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಹ ವೀಕ್ಷಣೆಯಲ್ಲೂ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಿದ್ದರಾಮಯ್ಯ ವಿರುದ್ಧ ಪ್ರವಾಹ ವೀಕ್ಷಣೆಯಲ್ಲೂ ದ್ವೇಷದ ರಾಜಕೀಯ ಆರೋಪ
author img

By

Published : Aug 21, 2019, 5:07 PM IST

ಬಾಗಲಕೋಟೆ: ಕಳೆದ ಮೂರು ದಿನಗಳಿಂದಲೂ ಮಲಪ್ರಭಾ ನದಿ ಪ್ರವಾಹದಿಂದ ಸಾಕಷ್ಟು ಹಾನಿಗೊಳಗಾಗಿದ್ದ ಬಾದಾಮಿ ಕ್ಷೇತ್ರವೂ ಸೇರಿ ಬಾಗಲಕೋಟೆ ಜಿಲ್ಲೆಯ ಹತ್ತಾರು ಗ್ರಾಮಗಳಿಗೆ ತೆರಳಿ ಮಾಜಿ ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಸಂತ್ರಸ್ತರ ನೋವು, ಸಮಸ್ಯೆಗಳನ್ನ ಆಲಿಸುತ್ತಿದ್ದಾರೆ.

ಆದರೆ, ಪ್ರವಾಹ ವೀಕ್ಷಣೆ ವೇಳೆ ಸಿದ್ದರಾಮಯ್ಯ ಬಾದಾಮಿ ತಾಲೂಕಿನ ಪ್ರಸಿದ್ದ ಧಾರ್ಮಿಕ ಕೇಂದ್ರ ಶ್ರೀಶಿವಯೋಗ ಮಂದಿರಕ್ಕೆ ಭೇಟಿ ನೀಡುವುದನ್ನು ಉದ್ದೇಶಪೂರ್ವಕವಾಗಿ ಮರೆತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

flood
ಸಿದ್ದರಾಮಯ್ಯ ವಿರುದ್ಧ ಪ್ರವಾಹ ವೀಕ್ಷಣೆಯಲ್ಲೂ ದ್ವೇಷದ ರಾಜಕೀಯ ಆರೋಪ

ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳು ಆರಂಭಿಸಿದ ಶಿವಯೋಗ ಮಂದಿರ ಪ್ರವಾಹಕ್ಕೆ ನಲುಗಿ ಸಾಕಷ್ಟು ಹಾನಿ ಉಂಟಾಗಿತ್ತು. ಇದು ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರವಾಗಿದ್ರೂ, ಶಿವಯೋಗ ಮಂದಿರದ ಅಕ್ಕಪಕ್ಕ, ಹಿಂದೆ, ಮುಂದಿನ ಗ್ರಾಮಗಳಿಗೆ ಭೇಟಿ ಮಾಡಿದ್ದ ಸಿದ್ದರಾಮಯ್ಯನವರು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಭೇಟಿ ನೀಡದೆ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Intro:AnchorBody:ಬಾಗಲಕೋಟೆ--ಪ್ರವಾಹ ವೀಕ್ಷಣೆಯಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಕಳೆದ ಮೂರು ದಿನಗಳಿಂದಲೂ ಬಾದಾಮಿ ಕ್ಷೇತ್ರದಲ್ಲಿ ಹತ್ತಾರು ಗ್ರಾಮ ವೀಕ್ಷಣೆ ಮಾಡಿದರು,ಶಿವಯೋಗ ಮಂದಿರ ಉದ್ದೇಶ ಪೂರ್ವಕವಾಗಿ ಮರೆತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾದಾಮಿ ತಾಲೂಕಿನ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿದ್ದ ಶಿವಯೋಗ ಮಂದಿರವು
ವೀರಶೈವ-ಲಿಂಗಾಯತ ವಟುಗಳ ವಿಶ್ವವಿದ್ಯಾಲಯ ಖ್ಯಾತಿ ಕ್ಷೇತ್ರ ಎಂದು ಹೆಸರು ವಾಸಿಯಾಗಿದೆ.

ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳು ಆರಂಭಿಸಿದ ಶಿವಯೋಗ ಮಂದಿರದಲ್ಲಿ
ಮಲಪ್ರಭಾ ನದಿ ಪ್ರವಾಹಕ್ಕೆ ನಲುಗಿದ ಸಾಕಷ್ಟು ಹಾನಿ ಉಂಟಾಗಿತ್ತು.

ಐದನೂರಕ್ಕೂ ಅಧಿಕ ಜಾನುವಾರುಗಳು ನೀರಲ್ಲಿದ್ದು ಸಂಕಷ್ಟ ಅನುಭವಿಸಿದ್ದವು.
ಮೇವಿನ ಅಭಾವ ಅಂದಿದ್ದಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಮೇವು ಹರಿದು ಬಂದು ಜಾನುವಾರುಗಳಿಗೆ ಸಹಾಯ ನೀಡಲಾಗಿತ್ತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕ್ಷೇತ್ರವಾಗಿದ್ದು,ಪ್ರವಾಹ ಪೀಡಿತ ಪ್ರದೇಶದಲ್ಲಿ ಮೂರು ದಿನಗಳ ಸಂಚಾರ ಮಾಡಿ ಪರಿಶೀಲನೆ ನಡೆಸಿದ್ದರೂ,ಶಿವಯೋಗಿ ಮಂದಿರ ತೆರಳಿದ್ದಿಲ್ಲ.
ಶಿವಯೋಗ ಮಂದಿರದ ಅಕ್ಕಪಕ್ಕ, ಹಿಂದೆ, ಮುಂದಿನ ಗ್ರಾಮಗಳಿಗೆ ಭೇಟಿ ಮಾಡಿದ್ದ ಸಿದ್ದರಾಮಯ್ಯ ನವರು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಭೇಟ್ಟಿ ನೀಡದೆ ಇರುವದು ಚರ್ಚೆಗೆ ಗ್ರಾಸವಾಗಿತ್ತು.Conclusion: ಈ ಟಿವಿ,ಭಾರತ,ಬಾಗಲಕೋಟೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.