ಬಾಗಲಕೋಟೆ: ಇಲ್ಲಿನ ನವನಗರದ ಎಸ್ಬಿಐ ಬ್ಯಾಂಕ್ ಶಾಖೆಯಲ್ಲಿ ಕ್ಯಾಶಿಯರ್ವೊಬ್ಬರು ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ನ ಸಿಬ್ಬಂದಿ ಸಂತೋಷ್ ಕಬಾಡೆ ಎಂಬುವವರು 1 ಕೋಟಿ 60 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿ ಪತ್ನಿ ಹಾಗೂ ತಾಯಿ ಮತ್ತು ತನ್ನ ಖಾತೆಗೆ ಜಮಾ ಮಾಡಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೂರು ತಿಂಗಳಿನಿಂದ ಜೂನ್ 4ರ ವರೆಗೆ ಟೆಲ್ಲರ್ ಐಡಿಯ ನಂಬರ್ ಮೂಲಕ ತನ್ನ ಪತ್ನಿ ಪೂಜಾ ಹಾಗೂ ತಾಯಿ ಜಾನಾಬಾಯಿ ಶಂಕರ ಕಬಾಡೆ ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್ನ ಶಾಖಾ ವ್ಯವಸ್ಥಾಪಕರಾದ ಅಲ್ಲಪ್ಪ ರಾಚಪ್ಪ ಲಕ್ಷೆಟ್ಟಿ ಅವರಿಂದ ನವನಗರದ ಎಪಿಎಂಸಿ ಬಳಿ ಇರುವ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಲಾಗಿದೆ.
ಸಿಸಿಟಿವಿ ಸೇರಿದಂತೆ ಪ್ರಮುಖ ದಾಖಲು ಪತ್ರಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳು ಪರಿಶೀಲನೆಗೆ ಆಗಮಿಸಿದ್ದಾರೆ. ಈಗಾಗಲೇ ಆರೋಪಿ ಕ್ಯಾಶಿಯರ್ ಸೇರಿದಂತೆ ಇತರ ಕೆಲ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆರೋಪಿಯ ಬ್ಯಾಂಕ್ ಖಾತೆಯಲ್ಲಿ ಹಣ ಇರುವ ಬಗ್ಗೆ ಪರಿಶೀಲನೆ ನಡೆಸಿದಾಗ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಓದಿ: ನವೋದ್ಯಮಗಳು ಆದಾಯದಲ್ಲಿ R & D ಗೆ ಶೇ. 30ರಷ್ಟು ಹಣ ಮೀಸಲಿಡಿ: ಸಚಿವ ಅಶ್ವತ್ಥನಾರಾಯಣ