ಬಾಗಲಕೋಟೆ: ಬಿಜೆಪಿ ಪಕ್ಷದ ಯುವ ಮುಖಂಡರಾಗಿದ್ದ ಸಂತೋಷ ಹೊಕ್ರಾಣಿ ಅವರ ಮನೆಗೆ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿ ನೀಡಿರುವ ಹಿನ್ನೆಲೆ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಸಂತೋಷ ಹೊಕ್ರಾಣಿ ಅವರನ್ನು ಪಕ಼ದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ಓದಿ: ಐಎಂಎ ಬಹುಕೋಟಿ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಅಲಿಖಾನ್ಗೆ ಹೈಕೋರ್ಟ್ನಿಂದ ಜಾಮೀನು
ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್.ಟಿ. ಪಾಟೀಲ ಅವರ ಆದೇಶದಂತೆ, ನಗರ ಮಂಡಲ ಅಧ್ಯಕ್ಷರಾಗಿರುವ ಬಸವರಾಜ್ ಅವರಾದಿ ಉಚ್ಚಾಟನೆ ಮಾಡಲಾಗಿದೆ ಎಂದು ಪತ್ರ ಮೂಲಕ ತಿಳಿಸಿದ್ದಾರೆ. ಕಳೆದ 18 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದ್ದ ಸಂತೋಷ ಹೊಕ್ರಾಣಿ, ಕಳೆದ ನಾಲ್ಕು ವರ್ಷಗಳಿಂದ ಶಾಸಕ ವೀರಣ್ಣ ಚರಂತಿಮಠ ಅವರೊಂದಿಗೆ ವೈಮನಸ್ಸು ಹೊಂದಿದ್ದರು.
ಇದರಿಂದ ಶಾಸಕರ ವಿರುದ್ಧ ಬಹಿರಂಗವಾಗಿ ಕಿಡಿಕಾರುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸ ವಾಗುವಂತಹ ಪೋಸ್ಟ್ ಮಾಡುತ್ತಿದ್ದರು. ಈ ಹಿನ್ನೆಲೆ ಈಗ ಪಕ್ಷದಿಂದ ಉಚ್ಟಾಟನೆ ಮಾಡಲಾಗಿದೆ.
ಜನವರಿ 31 ರಂದು ಜೆಡಿಎಸ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದ ಸಂದರ್ಭದಲ್ಲಿ ಸಂತೋಷ ಹೊಕ್ರಾಣಿ ಅವರ ಮನೆಗೆ ಹೋಗಿ ಊಟ ಮಾಡಿ, ಪಕ್ಷಕ್ಕೆ ಆಹ್ವಾನಿಸಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.