ಬಾಗಲಕೋಟೆ: ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಸಾರಾಯಿ ಅಂಗಡಿ, ಬಾರ್ ಓಪನ್ ಮಾಡಲಿಕ್ಕೆ ಅಲ್ಲ, ಎಂಎಸ್‌ಐಎಲ್ ಪರವಾನಗಿ ಪತ್ರ ಸಹ ಕೂಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ನೂತನ ಸಭಾಂಗಣದಲ್ಲಿ ಮದ್ಯಪಾನ ನಿಷೇಧ ಮಂಡಳಿ ವತಿಯಿಂದ ಕೂಡುವ ಸಂಯಮ ಪ್ರಶಸ್ತಿ ವಿತರಣೆ ಸಮಾರಂಭಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಉಪ ಮುಖ್ಯಮಂತ್ರಿಗಳು ಮಾತನಾಡಿದರು.
ಇತ್ತೀಚೆಗೆ ಚುನಾವಣೆ ಬಂದರೆ ಸಾಕು, ವ್ಯವಸ್ಥೆ ಮಾಡಿಸಿ ಎಂದು ಜನಪ್ರತಿನಿಧಿಗಳಿಗೆ ಗಂಟು ಬೀಳುತ್ತಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇಂತಹ ವ್ಯವಸ್ಥೆಗಳನ್ನು ಮಾಡುವ ಜನರು ಇರುತ್ತಾರೆ. ಈ ವ್ಯವಸ್ಥೆ ಮುಕ್ತಾಯ ಆಗಬೇಕು, ಮಾನವ ಕಲ್ಯಾಣ ಮಾಡಬೇಕಾಗಿದೆ ಎಂದರು.
25 ವರ್ಷ ಆಯಿತು ನಿಮ್ಮ ಹಿಂದೆ ಬಿದ್ದು, ಸಾರಾಯಿ ಅಂಗಡಿ, ಬಾರ್ ಓಪನ್ ಮಾಡುವಂತೆ ಪತ್ರವಾದರೂ ಕೂಡಿ ಎಂದು ನಮ್ಮ ಕೆಲ ಬೆಂಬಲಿಗರು ಕೇಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಸಾರಾಯಿ ಅಂಗಡಿ ಓಪನ್ ಮಾಡಿಸಲು ಅಲ್ಲ ಎಂದು ತಿಳಿಸುತ್ತಿರುವುದಾಗಿ ಹೇಳಿದರು. ಸಂಯಮ ಪ್ರಶಸ್ತಿ ಬಗ್ಗೆ ಮಾತನಾಡಿ, ಇಲಕಲ್ಲ ವಿಜಯ ಮಹಾಂತ ಶ್ರೀಗಳಿಗೆ ಸಂಯಮ ಪ್ರಶಸ್ತಿ ನೀಡಿರುವುದು ಪ್ರಶಸ್ತಿಗೂ ಬೆಲೆ ಬಂದಿದೆ. ಶ್ರೀಗಳ ಜವಾಬ್ದಾರಿ ಹೆಚ್ಚಾಗಲಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗುರು ವಿಜಯಮಹಾಂತ ಶ್ರೀಗಳು, ಇನ್ನು ಇಪ್ಪತ್ತು ವರ್ಷದಲ್ಲಿ ಪ್ರತಿಯೊಬ್ಬರ ಮನೆಯು ಸ್ಮಶಾನ ಆಗಲಿದೆ. ಏಕೆಂದರೆ ಈಗ ಯುವತಿಯರು ಸಹ ಕುಡಿತದ ಚಟಕ್ಕೆ ಬಿದ್ದುರುವುದು ಅಪಾಯಕಾರಿ ಆಗಿದೆ. ಈಗಾಗಲೇ ಬೆಂಗಳೂರನಲ್ಲಿ ಯುವತಿ ಪಬ್, ಬಾರ್‌ನಂತಹ ದುಷ್ಟ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ತಾಯಿ ಆಗುವವಳು ಕುಡಿತದ ಚಟಕ್ಕೆ ಬಿದ್ದರೆ, ಮುಂದೆ ಮಕ್ಕಳು ಹೇಗೆ ಸಂಸ್ಕಾರ ಬೆಳೆಯಲು ಸಾಧ್ಯ?, ಹೀಗಾಗಿ ವಿದೇಶಿಗಳಲ್ಲಿ ಸಂಸ್ಕಾರ ಇಲ್ಲದೆ ಹಾಳಾಗುತ್ತಿದ್ದಾರೆ ಎಂದರು.
ಈ ಪ್ರಶಸ್ತಿ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಸಮಾಜ ನಮ್ಮ ಜೊತೆಗೆ ಕೈ ಜೋಡಿಸಿದರೆ ದುಷ್ಟಚಟ ಮುಕ್ತಗೊಳಿಸಬಹುದು ಎಂದರು. ಪ್ರಶಸ್ತಿ ಫಲಕ ಮಠ ಭಕ್ತರಿಗೆ ಹಾಗೂ ಸ್ವಾಮೀಜಿಗಳಿಗೆ ಸಮರ್ಪಣೆ ಮಾಡಿ, ಪ್ರಶಸ್ತಿಯ ಒಂದು ಲಕ್ಷ ಹಣವನ್ನು ಇಲಕಲ್ಲ ಪಟ್ಟಣದಲ್ಲಿ ಇರುವ ಮದ್ಯವ್ಯಸನ ತಡೆ ಕೇಂದ್ರಕ್ಕೆ ನೀಡುವುದಾಗಿ ತಿಳಿಸಿದರು.
ಸ್ಥಳೀಯ ಚರಂತಿಮಠ ದ ಪ್ರಭು ಸ್ವಾಮೀಜಿಯವರು ಸಮಾರಂಭದ ಸಾನಿಧ್ಯ ವಹಿಸಿದರೆ, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ಶ್ರೀಗಳನ್ನು ಕುಂಭ ಮೇಳದ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.