ETV Bharat / state

ಅವಸರ ತಂದ ಆಪತ್ತು: ಹುಟ್ಟುಹಬ್ಬದಂದೇ ರಸ್ತೆ ಅಪಘಾತಕ್ಕೆ ಬಾಗಲಕೋಟೆಯಲ್ಲಿ ಇಬ್ಬರು ಯುವಕರು ಬಲಿ - ETV Bharath Kannada

ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಾಪಸಾಗುವ ವೇಳೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

bike accident two youth death in Bagalkote
ಅವಸರ ತಂದ ಆಪತ್ತು: ಜನ್ಮ ದಿನವೇ ಅಪಘಾತದಲ್ಲಿ ಸಾವನ್ನಪ್ಪಿದ ಯುವಕರು
author img

By

Published : Dec 7, 2022, 10:27 AM IST

ಬಾಗಲಕೋಟೆ: ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವಾಪಸ್​ ಬರುವ ಸಮಯದಲ್ಲಿ ರಸ್ತೆ ಅಪಘಾತವಾಗಿ ಇಬ್ಬರು ಯವಕರು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆ ನಗರದ ಬಳಿ ಸಂಭವಿಸಿದೆ. ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುವಾಗ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮತ್ತು ಹಿಂಬದಿ ಕುಳಿತ್ತಿದ್ದವ ಸಾವನ್ನಪ್ಪಿದ್ದಾರೆ.

ಬಾಗಲಕೋಟೆ ನಗರದ ಗದ್ದನಕೇರಿ ತಾಂಡ ಬಳಿ ಈ ಘಟನೆ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೇಹ ಎರಡು ತುಂಡಾಗಿದೆ. ನವನಗರದ ಸಂಗಮೇಶ(21), ಶಿರಗುಪ್ಪಿ ತಾಂಡಾದ ಕಿರಣ (21)ಮೃತರು. ಸಂಗಮೇಶನ ಜನ್ಮದಿನದ ಹಿನ್ನೆಲೆ, ಹುಟ್ಟುಹಬ್ಬದ ಪಾರ್ಟಿ ಮಾಡಿಕೊಂಡು ವಾಪಸ್​ ಬರುವಾಗ ಈ ದುರಂತ ಸಂಭವಿಸಿದೆ.

ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಪೆಟ್ರೋಲ್​ ಸುರಿದು ಕೊಲ್ಲಲೆತ್ನಿಸಿದ ತಾಯಿ: ಒಂದು ಮಗು ಸಾವು, ಆತ್ಮಹತ್ಯೆಗೆ ಯತ್ನಿಸಿದ ಅಮ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.