ETV Bharat / state

ಬಾಗಲಕೋಟೆ ಜಿಲ್ಲಾ ಪಂಚಾಯತ್ 11ನೇ ಸಾಮಾನ್ಯ ಸಭೆ

author img

By

Published : Jan 17, 2020, 11:35 PM IST

ಬಾಗಲಕೋಟೆ ಜಿಲ್ಲಾ ಪಂಚಾಯತ್​ ಸಭಾಭವನದಲ್ಲಿ 11ನೇ ಸಾಮಾನ್ಯ ಸಭೆ ನಡೆಯಿತು.

ಸಾಮಾನ್ಯ ಸಭೆ
ಸಾಮಾನ್ಯ ಸಭೆ

ಬಾಗಲಕೋಟೆ: ಜಿಲ್ಲಾ ಪಂಚಾಯತ್​ ಸಭಾಭವನದಲ್ಲಿ 11ನೇ ಸಾಮಾನ್ಯ ಸಭೆಯು ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಗುಡೂರ ಜಿ.ಪಂ ಸದಸ್ಯ ಶಶಿಕಾಂತ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅವ್ಯವಹಾರ ಬಗ್ಗೆ ಕಿಡಿಕಾರಿದರು. ಈ ಯೋಜನೆ ಬಗ್ಗೆ ಮಾಹಿತಿ ಕೇಳಿದರೆ ಸಿಇಓ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಇಓ ಗಂಗೂಬಾಯಿ ಮಾನಕರ್, ಸದಸ್ಯರ ಫೋನು ಸ್ವೀಕರಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ 11ನೇ ಸಾಮಾನ್ಯ ಸಭೆಯಲ್ಲಿ ಗದ್ದಲ

ಬಳಿಕ ವೇದಿಕೆಯ ಮುಂದೆ ಬಂದ ಶಶಿಕಾಂತ ಪಾಟೀಲ, ಈ ಯೋಜನೆ ಬಗ್ಗೆ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯ ಮಾಹಿತಿಯನ್ನು ಲಿಖಿತ ರೂಪದಲ್ಲಿ ದಾಖಲೆ ನೀಡಿ, ಇಲ್ಲವೇ ರಾಜಿನಾಮೆ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು .

Intro:Anchor

Body:ಬಾಗಲಕೋಟೆ ಜಿಲ್ಲಾ ಪಂಚಾಯತ ಸಭಾಭವನ ದಲ್ಲಿ 11 ನೇ ಸಾಮಾನ್ಯ ಸಭೆಯು ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯ ಪ್ರಾರಂಭದ ಮೊದಲು,ಸಂಕ್ರಮಣ ಹಬ್ಬದ ಅಂಗವಾಗಿ ಅಧ್ಯಕ್ಷೆ ಮೇಟಿ ಅವರು, ಜಿಲ್ಲಾ ಪಂಚಾಯತ ಮಹಿಳಾ ಸದಸ್ಯರಿಗೆ ಕುಂಕುಮ, ಅರಿಷಿಣ ಹಚ್ಚಿ,ಆರತಿ ಬೆಳಗಿ,ಹೂ ನೀಡುವ ಮೂಲಕ ಸಂಕ್ರಾಂತಿ ಹಬ್ಬ ಆಚರಣೆ ಮಾಡಿ,ಸಿಹಿ ಹಂಚಿ ವಿನಮಯ ಮಾಡಿಕೊಂಡರು.
ನಂತರ ಸಭೆಯಲ್ಲಿ ಗದ್ದಲ,ಗೊಂದಲ, ಮಾತಿನ ಚಕಮಕಿ ಹಾಗೂ ಪ್ರತಿಭಟನೆ ನಡೆಸುವ ಮೂಲಕ ಸಭೆಯು ಮಹತ್ವದ ತೀರ್ಮಾನ ತೆಗೆದುಕೊಳ್ಳದೆ ಗೊಂದಲದಲ್ಲಿ ಸಭೆ ನಡೆಸಲಾಯಿತು.
ಗುಡೂರ ಜಿ.ಪಂ ಸದಸ್ಯರಾದ ಶಶಿಕಾಂತ ,ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಬಹುಗ್ರಾಮ ಕುಡಿಯುವ ಯೋಜನೆ ಬಗ್ಗೆ ಅವ್ಯವಹಾರ ನಡೆದಿದೆ.ಕಳೆದ ವರ್ಷಗಳಿಂದಲೇ ಈ ಯೋಜನೆ ಬಗ್ಗೆ ಮಾಹಿತಿ ಕೇಳಿದರೆ,ಸಿಇಓ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ.ಸಿಇಓ ಗಂಗೂಬಾಯಿ ಮಾನಕರ್, ಸದಸ್ಯರ ಪೋನು ಸ್ವೀಕಾರ ಮಾಡುವುದಿಲ್ಲ. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡರು ಸದಸ್ಯರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಆಕ್ರೋಶಗೊಂಡರು.ಈ ಸಮಯದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮುತ್ತಪ್ಪ ಕುಮಾರ್ ಹಾಗೂ ಶಶಿಕಾಂತ ಪಾಟೀಲ ನಡುವೆ ಮಾತಿನ ಚಕಿಮಕಿ ನಡೆದ ಏಕವಚನ ದಲ್ಲಿ ಮಾತನಾಡುವ ಮಟ್ಟಿಗೆ ಹೋಗಿತು.ನಂತರ ಸಿಇಓ ಅಧಿಕಾರಿಗೆ ಮಾಹಿತಿ ಕೇಳಿದ್ದು,ನಿಮ್ಮಗೆ ಅಲ್ಲ ಎಂದು ತಿಳಿಸಿದ ನಂತರ ತಿಳಿ ಆಯಿತು ‌.ಈ ಸಮಯದಲ್ಲಿ ವೇದಿಕೆಯ ಮುಂದೆ ಬಂದು ಶಶಿಕಾಂತ ಪಾಟೀಲ ಸಿಇಓ ಮಾನಕರ್ ಅವರಿಗೆ,ಬಹು ಗ್ರಾಮ ಕುಡಿಯುವ ಯೋಜನೆ ಬಗ್ಗೆ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆ ನಡೆಸಿರುವ ಮಾಹಿತಿಯನ್ನು ಲಿಖಿತ ರೂಪದಲ್ಲಿ ದಾಖಲೆ ನೀಡಿ,ಇಲ್ಲವೇ ರಾಜಿನಾಮೆ ತೆಗೆದುಕೊಳ್ಳಿ ಎಂದು ಆಕ್ರೋಶ ಹೂರಹಾಕಿದರು. ಈ ಸಮಯದಲ್ಲಿ ಬಿಜೆಪಿ ಪಕ್ಷದ ಸದಸ್ಯರಾದ ಹೋವಪ್ಪ ರಾಥೋಡ,ಶಿವಾನಂದ,ಪಾಲಭಾವಿ ಸೇರಿದಂತೆ ಇತರ ಸದಸ್ಯರು ಕೈ ಜೋಡಿಸಿ,ವೇದಿಕೆ ಯ ಕೆಳಗೆ ಪ್ರತಿಭಟನೆ ನಡೆಸಿದರು. ಊಟವನ್ನು ಮಾಡದೇ ಧಿಕ್ಕಾರ ಕೂಗಿದರು.
ಇದೇ ಸಮಯದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ,ನಿಮ್ಮ ಬೇಡಿಕೆ ಗೆ ನನ್ನ ಬೆಂಬಲ ಇದೆ.ಇಂತಹ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ ತನಿಖೆ ನಡೆಸಿರುವ ದಾಖಲೆ ನೀಡುತ್ತಾರೆ.ಆದರೆ ಜಿಲ್ಲೆಯಲ್ಲಿ ,ಪ್ರವಾಹ ದಿಂದ ಉಂಟಾದ ತೊಂದರೆ,ಮಹಿಳೆಯರ ಮೇಲೆ ದೌರ್ಜನ್ಯ, ರೈತರ ಸಮಸ್ಯೆ ಸೇರಿದಂತೆ ಇತರ ಸಮಸ್ಯೆ ಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಮನವಿ ಮಾಡಿಕೊಂಡರು ಯಾವ ಸದಸ್ಯರು ಕೇಳಲಿಲ್ಲ.ನಂತರ ಊಟದ ಪ್ಲೇಟ್ ತರಿಸಿ,ಪ್ರತಿಭಟನೆ ನಿರತರಿಗೆ ಹಾಲಿ ಹಾಗೂ ಮಾಜಿ ಅಧ್ಯಕ್ಷೆಯರು ಸಹೋದರರಿಗೆ ಊಟ ಮಾಡಿಸುವುದಾಗಿ ಒತ್ತಾಯ ಪೂರ್ವಕವಾಗಿ ತುತ್ತು ಹಾಕುವ ಮೂಲಕ ಪ್ರತಿಭಟನೆ ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಊಟ ಆದ ಮೇಲೆ ನಡೆದ ಸಭೆಯಲ್ಲಿ ವಿವಿಧ ಯೋಜನೆಯ ಬಗ್ಗೆ ನಡೆದಿರುವ ಭ್ರಷ್ಟಾಚಾರ,ಅಧಿಕಾರಿಗಳು ಸರಿಯಾದ ಸ್ಪಂದಸಿದವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು.ಮತ್ತೋಮ್ಮೆ ಶೀಘ್ರವಾಗಿ ಸಭೆ ನಡೆಸಿ, ಜಿಲ್ಲೆಯ ಸಮಸ್ಯೆ ಗಳ ಬಗ್ಗೆ ಬೆಳಕು ಚೆಲ್ಲಿ,ಕ್ರೀಯಾ ಯೋಜನೆ ಜಾರಿಗೆ ತರಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

Conclusion:ಈ ಟಿವಿ, ಭಾರತ,ಬಾಗಲಕೋಟೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.