ಬಾಗಲಕೋಟೆ: ಇನ್ಮುಂದೆ ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮ ದೇವ ವಚನಾಂಕಿತ ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾತನಾಡಿ, ಕೋರ್ಟ್ ಆದೇಶ ಬಗ್ಗೆ ತಿಳಿಸಿದರು. ಹಲವು ಸ್ವಾಮೀಜಿಗಳ ವಿರೋಧದ ಮಧ್ಯೆ 25 ವರ್ಷಗಳ ಹಿಂದೆ ಈ ವಿವಾದ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಬಸವಣ್ಣನವರ ವಚನಗಳ ಅಂಕಿತ ನಾಮ ಬಳಕೆಯಲ್ಲಿದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಹೈಕೋರ್ಟ್ ಆದೇಶದಂತೆ ಇನ್ನು ಮುಂದೆ ವಚನಗಳಿಗೆ ಕೂಡಲಸಂಗಮದೇವ ಎಂದು ಬಳಸುತ್ತೇವೆ, ಲಿಂಗದೇವ ಎಂಬ ಅಂಕಿತನಾಮವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಚಾಮರಾಜನಗರ..ಕುವೆಂಪು ಜನ್ಮದಿನಾಚರಣೆಗೆ ಬರದ ಡಿಸಿ, ಎಸ್ಪಿ, ಸಿಇಒ.. ಕಾರ್ಯಕ್ರಮ ತಡೆದು ಆಕ್ರೋಶ