ಬಾಗಲಕೋಟೆ : ಶಂಕರಲಿಂಗ ಗೋಗಿ ಎಂಬ ಸರ್ಕಾರಿ ಅಧಿಕಾರಿಯೊಬ್ಬರು ಕಳೆದ 10 ವರ್ಷಗಳಿಂದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಹುದ್ದೆಯಲ್ಲಿದ್ದಾರೆ. ಇದರ ಜತೆಗೆ ಸಾಹಿತ್ಯದ ಬಗ್ಗೆ ತಮ್ಮ ಅಭಿರುಚಿ ಬೆಳೆಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
ಓದಿ: ಓದಿ: ತಮಿಳುನಾಡಿನಲ್ಲಿ ಜೂ.14 ರವರೆಗೆ ಲಾಕ್ಡೌನ್ ವಿಸ್ತರಣೆ : ಏನಿರುತ್ತೆ.. ಏನಿರಲ್ಲ..!
ಸುಮಾರು 150ಕ್ಕೂ ಅಧಿಕ ಕವನ ಬರೆದಿದ್ದು, ಕೊರೊನಾ ಸೇರಿ ಪ್ರಚಲಿತ ಸಂಗತಿಗಳ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಮ್ಮದೇ ಆದ ಅಂಕಿ-ಸಂಖ್ಯೆಗಳ ಲೆಕ್ಕಾಚಾರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸಿವಿಲ್ ಇಂಜಿನಿಯರ್ ಅಧ್ಯಯನ ಮಾಡಿರುವ ಇವರು ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯದ ಹುಚ್ಚು ಬೆಳೆಸಿಕೊಂಡಿದ್ದಾರೆ.
ಸರ್ಕಾರ ಯಾವ ಮಾರ್ಗ ಅನುಸರಿಸಿ ಕೊರೊನಾ ಸೋಂಕನ್ನು ಹತೋಟಿ ತರಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಸುವ ಲೇಖನ ಬರೆದಿದ್ದಾರೆ. ಈ ಎಲ್ಲವನ್ನು ಪುಸ್ತಕ ರೂಪದಲ್ಲಿ ತರುವ ನಿಟ್ಟಿನಲ್ಲಿ ಕಾರ್ಯ ಪ್ರಾರಂಭಿಸಿದ್ದಾರೆ. ಆದರೆ, ಕೊರೊನಾದಿಂದ ಪುಸ್ತಕ ಹೂರ ಬಂದಿಲ್ಲ.
ಕಳೆದ ತಿಂಗಳು ಶಂಕರಲಿಂಗ ಗೋಗಿ ಅವರಿಗೂ ಕೊರೊನಾ ಪಾಸಿಟನ್ ಬಂದಿತ್ತು. ಅವರು ಮನೆಯಲ್ಲಿ 14 ದಿನಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದಾಗ, ಇನ್ನಷ್ಟು ಸಾಹಿತ್ಯಿಕವಾಗಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ತಮ್ಮ ಕೆಲಸದ ಜತೆಗೆ ಸಾಹಿತ್ಯದ ಅಭಿರುಚಿ, ಬರವಣಿಗೆ ಹವ್ಯಾಸ ಬೆಳೆಸಿಕೊಂಡು ಬಂದಿರುವುದು ವಿಶೇಷ.