ಬಾಗಲಕೋಟೆ: ಐತಿಹಾಸಿಕ ಕೇಂದ್ರ ಹಾಗೂ ಧಾರ್ಮಿಕ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯಕ್ಕೆ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಬುಧವಾರ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಯ ಕಾಲ ಗರ್ಭ ಗುಡಿಯಲ್ಲಿ ಕುಳಿತುಕೊಂಡು ಸುಧಾ ಮೂರ್ತಿ ಅವರು ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಹೋದರಿಯೊಂದಿಗೆ ಆಗಮಿಸಿದ್ದ ಅವರನ್ನು ಕಂಡು ವಿದ್ಯಾರ್ಥಿಗಳು ಪುಳಕಿತಗೊಂಡರು.
ಈ ವೇಳೆ ಶಿಕ್ಷಕರು ಸುಧಾಮೂರ್ತಿ ಅವರು ಬಂದಿರುವ ಬಗ್ಗೆ ಮಕ್ಕಳಿಗೆ ತಿಳಿಸುತ್ತಲೇ ಸುಧಾಮೂರ್ತಿ ಅವರ ಸರಳತೆ ಕಂಡು ವಿದ್ಯಾರ್ಥಿಗಳು ಅಚ್ಚರಿಗೊಂಡರು. ಇದೇ ಸಮಯದಲ್ಲಿ, ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು ಯೋಗಕ್ಷೇಮ, ಕುಶಲೋಪರಿ ವಿಚಾರಿಸಿದರು. ದೈತ್ಯ ಸಾಫ್ಟ್ವೇರ್ ಕಂಪನಿಯ ಮುಖ್ಯಸ್ಥರಾಗಿದ್ದರೂ ತಮ್ಮ ಸರಳತೆಯಿಂದ ಸುಧಾ ಮೂರ್ತಿ ಅವರು ವಿದ್ಯಾರ್ಥಿಗಳ ಗಮನ ಸೆಳೆದರು.
ಇದನ್ನೂಓದಿ: ಪಿಎಸ್ಐ ಪರೀಕ್ಷಾ ಹಗರಣದಲ್ಲಿ ಕಾಂಗ್ರೆಸ್ನಿಂದ ಅಶ್ವತ್ಥ್ ನಾರಾಯಣ ಟಾರ್ಗೆಟ್: ಪ್ರತಾಪ್ ಸಿಂಹ