ETV Bharat / state

ಉಕ್ರೇನ್‌ನಲ್ಲಿ ಸಿಲುಕಿಕೊಂಡ ಬಾಗಲಕೋಟೆಯ ಇಬ್ಬರು MBBS ವಿದ್ಯಾರ್ಥಿಗಳು - ರಷ್ಯಾ ಮತ್ತು ಉಕ್ರೇನ್ ಯುದ್ಧ

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ. ಇತ್ತ ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್​ಗೆ ತೆರಳಿದ್ದ ಬಾಗಲಕೋಟೆಯ ಇಬ್ಬರು MBBS ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.

Bagalkot Two MBBS Students are stuck in Ukraine
ಉಕ್ರೇನ್‌ನಲ್ಲಿ ಸಿಲುಕಿಕೊಂಡ ಬಾಗಲಕೋಟೆ ಇಬ್ಬರು MBBS ವಿದ್ಯಾರ್ಥಿಗಳು
author img

By

Published : Feb 24, 2022, 7:08 PM IST

ಬಾಗಲಕೋಟೆ: ರಷ್ಯಾ-ಉಕ್ರೇನ್​ ಮಧ್ಯೆ ಯುದ್ಧ ಆರಂಭವಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲಿರುವ ಏರ್​ಪೋರ್ಟ್​ಗಳ ಮೇಲೆ ರಷ್ಯಾ ದಾಳಿ ಮಾಡಿರುವ ಹಿನ್ನೆಲೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಇತ್ತ ಉಕ್ರೇನ್​​ನಲ್ಲಿ ನಗರದ ಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಇಲ್ಲಿನ ವಿದ್ಯಾಗಿರಿಯ ವಿದ್ಯಾರ್ಥಿ ಮನೋಜ್​ ಕುಮಾರ ಚಿತ್ರಗಾರ(20) ಪ್ರಥಮ ವರ್ಷದ ಎಂಬಿಬಿಎಸ್ ​​ ವ್ಯಾಸಂಗ ಮಾಡುತ್ತಿದ್ದಾರೆ. ಡಿಸೆಂಬರ್ 10ಕ್ಕೆ ಉಕ್ರೇನ್​ಗೆ ವಿದ್ಯಾರ್ಥಿ ಉಕ್ರೇನ್​ಗೆ ತೆರಳಿದ್ದಾರೆ. ಸದ್ಯ ಕಾಲೇಜಿನ ವಿದ್ಯಾರ್ಥಿನಿಯಲದಲ್ಲಿರುವ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ದೂರವಾಣಿ ಕರೆ ಮಾಡಿ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಯುವಕ ಚಿತ್ರಗಾರ ಫೆಬ್ರುವರಿ.28ಕ್ಕೆ ಭಾರತಕ್ಕೆ ಫ್ಲೈಟ್ ಬುಕ್ ಮಾಡಿದ್ದ ಎಂದು ತಿಳಿದು ಬಂದಿದೆ.

ಅದರಂತೆ ಅಪೂರ್ವ ಎಂಬ ಮತ್ತೊಬ್ಬ ವಿದ್ಯಾರ್ಥಿನಿ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಉಕ್ರೇನ್​ಗೆ ತೆರಳಿದ್ದು, ತಾಯಿ ಜ್ಯೋತಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿಡಿಯೋ ಕಾಲ್​ ಮೂಲಕ ಮಾತನಾಡಿ ಸಮಾಧಾನ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಸಿಲುಕಿದ ಕೊಪ್ಪಳ ವಿದ್ಯಾರ್ಥಿ: ಪೋಷಕರಲ್ಲಿ ಹೆಚ್ಚಿದ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.