ಬಾಗಲಕೋಟೆ : ಐಪಿಎಲ್ ಮಾದರಿಯಲ್ಲಿ ಬಾಗಲಕೋಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಬಾಗಲಕೋಟೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ನಿರ್ಮಿಸಲಾಗಿದೆ.
ಓದಿ: ಇನ್ನು ಮುಂದೆ ಯಾವುದೇ ರಾಷ್ಟ್ರೀಯ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಲ್ಲ; ಎಚ್ಡಿಕೆ
ಪಡಿಯಪ್ಪ ಕಟಗೇರಿ, ವಾದಿರಾಜ ಕುಲಕರ್ಣಿ ಸೇರಿದಂತೆ ಇತರ ಯುವಕ ತಂಡದವರು ಆಯೋಜನೆ ಮಾಡಿರುವ ಈ ಬಿಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಶಾಸಕ ಪಿ ಹೆಚ್ ಪೂಜಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಹ ಮತ್ತು ಆರೋಗ್ಯ ಕಾಪಾಡಲು ಕ್ರೀಡೆ ಅಗತ್ಯವಿದೆ. ಆದರೆ, ಸೋಲು ಗೆಲುವಿನ ಸೋಪಾನವಾಗಿದೆ. ಪ್ರತಿಭೆ ತೋರ್ಪಡಿಸಿಕೊಳ್ಳುವ ವೇದಿಕೆಯನ್ನ ಬಳಕೆ ಮಾಡಿಕೊಂಡು, ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಹೆಸರು ಮಾಡುವುದು ಅಗತ್ಯ ಎಂದರು.
ಒಟ್ಟು ಎಂಟು ತಂಡಗಳಿದ್ದು, ಪ್ರತಿಯೊಂದು ತಂಡವನ್ನು ಒಬ್ಬ ಮಾಲೀಕತ್ವದಲ್ಲಿ ಹರಾಜು ಮಾಡಿ ಆಯ್ಕೆ ಮಾಡುವ ಪದ್ದತಿಯಂತೆ ತಂಡ ಮಾಡಲಾಗಿದೆ. ಒಟ್ಟು ಎಂಟು ತಂಡಗಳು, ಒಂಬತ್ತು ವಾರಗಳ ಕಾಲ ಆಡಲಿದ್ದು, ಪ್ರತಿ ತಂಡ ಏಳು ಬಾರಿ ಎಲ್ಲ ತಂಡಗಳ ಮೇಲೆ ಸ್ಪರ್ಧೆ ಮಾಡಬೇಕಾಗಿದೆ. ಪ್ರಥಮ ಬಹುಮಾನ 50 ಸಾವಿರ ರೂಪಾಯಿಗಳು ಹಾಗೂ ಒಂದು ಟ್ರೋಫಿ, ದ್ವೀತಿಯ ಬಹುಮಾನ 25 ಸಾವಿರ ರೂ. ಒಂದು ಟ್ರೋಫಿ ಇಡಲಾಗಿದೆ.
ಇದರ ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮನ್, ಬೆಸ್ಟ್ ಕ್ಯಾಚರ್ ಹೀಗೆ ವಿವಿಧ ಕ್ರೀಡಾಪಟುಗಳಿಗೆ ಬಹುಮಾನ ನೀಡಲಾಗುತ್ತದೆ. ಇಲ್ಲಿ ಸಂಪ್ರದಾಯ ಜಾನಪದ ಕಲೆ ಸಂಸ್ಕೃತಿ ಬಿಂಬಿಸುವ ಕರಡಿ ಮಜಲು ಭಾರಿಸುವ ಮೂಲಕ ಕ್ರೀಡಾಪಟುಗಳಿಗೆ ಹುರಿ ದುಂಬಿಸುವ ಕಾರ್ಯ ಮಾಡಲಾಗುತ್ತದೆ. ಇದರ ಜೊತೆಗೆ ಜಿಲ್ಲೆಯ ಸಂಸ್ಕೃತ, ಕಲೆಯನ್ನು ಬೆಳೆಸುತ್ತಿರುವುದು ವಿಶೇಷವಾಗಿದೆ.