ಬಾಗಲಕೋಟೆ: ಕೇಂದ್ರ ಸಚಿವರಾದ ಸುರೇಶ ಅಂಗಡಿಯವರು ನಿಧನರಾಗಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ಜನತೆಗೂ ಆಘಾತ ಉಂಟಾಗಿದೆ ಎಂದು ನಿರ್ಮಾಪಕ ಘನಶ್ಯಾಮ ಭಾಂಡೆಗೆ ತಿಳಿಸಿದರು.
ಜಿಲ್ಲೆಗೆ ಅವಿನಾಭಾವ ಸಂಬಂಧ ಇದ್ದ ಹಿನ್ನೆಲೆ ಅಕಾಲಿಕ ನಿಧನದಿಂದ ದುಃಖ ಪಡುವಂತಾಗಿದೆ. ರೈಲ್ವೆ ಇಲಾಖೆ ಸಹಾಯಕ ಸಚಿವರಾದ ಬಳಿಕ ಕುಡಚಿ ರೈಲು ಮಾರ್ಗ ಕಾಮಗಾರಿ ಸೇರಿದಂತೆ ಇತರ ನೂತನ ರೈಲು ಮಾರ್ಗ, ರೈಲು ನಿಲ್ದಾಣ ಸೌಕರ್ಯಗಳನ್ನು ಒದಗಿಸುವ ಹಲವು ಕಾರ್ಯಗಳು ಹಾಕಿಕೊಂಡಿದ್ದರು. ಶಾಸಕ ವೀರಣ್ಣ ಚರಂತಿಮಠ ಅವರ ಆತ್ಮೀಯರಾಗಿದ್ದ ಸುರೇಶ ಅಂಗಡಿ ಜಿಲ್ಲೆಯ ಪ್ರಮುಖ ಬೇಡಿಕೆಯನ್ನು ಇಡೆರೀಸುವಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.
ಇದರ ಜೊತೆಗೆ ಬಾಗಲಕೋಟೆ ನಗರದ ನಿಮಾರ್ಪಕರಾಗಿದ್ದ ಘನಶ್ಯಾಮ ಭಾಂಡಗೆ ನಿರ್ಮಾಣದ ಇಂಗಳೆಮಾರ್ಗ ಚಲನಚಿತ್ರ ಉದ್ಘಾಟನಾ ಕಾರ್ಯಕ್ರಮ ಭಾಗವಹಿಸಿ, ಸ್ವಾಮೀಜಿಗಳ ನೇತೃತ್ವದಲ್ಲಿ ಚಲನಚಿತ್ರ ವೀಕ್ಷಣೆ ಮಾಡಿ, ತಮ್ಮ ಸರಳತೆಯನ್ನು ಮೆರೆದಿದ್ದರು. ಇಂತಹ ವ್ಯಕ್ತಿತ್ವದ ಸಚಿವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ. ಅವರ ನೆನೆಪು ಸದಾ ಉಳಿಯುವಂತಾಗಿದೆ ಎಂದು ನಿರ್ಮಾಪಕ ಘನಶ್ಯಾಮ ಭಾಂಡೆಗೆ ತಿಳಿಸಿದ್ದಾರೆ.