ಬಾಗಲಕೋಟೆ: ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆ ನಾಳೆ ನಡೆಯಲಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸ್ಪರ್ಧೆ ತೀವ್ರ ಕುತೂಹಲಕಾರಿ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಹಕಾರಿ ಕ್ಷೇತ್ರದಲ್ಲಿ ಬಸವೇಶ್ವರ ಬ್ಯಾಂಕ್ನ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ ಹಾಗೂ ಡಿಸಿಸಿ ಬ್ಯಾಂಕ್ನ ಮಾಜಿ ಉಪಾಧ್ಯಕ್ಷರಾಗಿದ್ದ ಶಿವಾನಂದ ಉದಪುಡಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಇದೇ ಇಬ್ಬರು ಸ್ಪರ್ಧಾಳುಗಳಾಗಿದ್ದರು. ಆಗ ಒಟ್ಟು 256 ಮತಗಳಲ್ಲಿ ಶಿವಾನಂದ ಉದಪುಡಿ ಅವರಿಗೆ 149 ಮತಗಳು ಹಾಗೂ ಪ್ರಕಾಶ್ ತಪಶೆಟ್ಟಿ ಅವರಿಗೆ 50 ಮತಗಳು ಬಂದಿದ್ದವು.
ಕಳೆದ ಚುನಾಚಣೆಯಲ್ಲಿ ಶಿವಾನಂದ ಉದಪುಡಿ ಅವರಿಗೆ ಉಂಗುರ ಗುರುತಿನ ಚಿಹ್ನೆ ಬಂದಿದ್ದು, ಈ ಬಾರಿಯೂ ಅದೇ ಚಿಹ್ನೆ ಬಂದಿರುವುದು ವಿಶೇಷ. ಇಬ್ಬರು ಲಿಂಗಾಯತ ಬಣಿಜಗ(ಶೆಟ್ಟರ) ಸಮುದಾಯದವರಾಗಿದ್ದು, ಜಾತಿ ಲೆಕ್ಕಾಚಾರ ಸಹ ಮುನ್ನಲೆಗೆ ಬಂದಿದೆ. ಈ ಬಾರಿ ಒಟ್ಟು 316 ಮತಗಳಿದ್ದು, ಇಬ್ಬರೂ ಅಭ್ಯರ್ಥಿಗಳು 250 ಮತಗಳನ್ನು ಪಡೆದುಕೊಳುತ್ತೇವೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.