ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 26 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ ಪಿ-10642 ಮೃತ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಅದೇ ಕುಟುಂಬದ 20 ವರ್ಷದ ಯುವತಿ ಪಿ-25322 (ಬಿಜಿಕೆ-264), 16 ವರ್ಷದ ಬಾಲಕಿ ಪಿ-25323 (ಬಿಜಿಕೆ-265), ಅದೇ ಗ್ರಾಮದ 56 ವರ್ಷದ ಮಹಿಳೆ ಪಿ-25324 (ಬಿಜಿಕೆ-266), ಜಿಕ್ಕ ಮ್ಯಾಗೇರಿ ಗ್ರಾಮದ ಪಿ-10173 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ 25 ವರ್ಷದ ಯುವತಿ ಪಿ-25325 (ಬಿಜಿಕೆ-267), 5 ವರ್ಷದ ಬಾಲಕಿ ಪಿ-25326 (ಬಿಜಿಕೆ-268), 36 ವರ್ಷದ ಮಹಿಳೆ ಪಿ-25327 (ಬಿಜಿಕೆ-269), 11 ವರ್ಷದ ಬಾಲಕಿ ಪಿ-25328 (ಬಿಜಿಕೆ-270), 9 ವರ್ಷದ ಬಾಲಕಿಗೆ ಪಿ-25329 (ಬಿಜಿಕೆ-271) ಕೊರೊನಾ ಸೋಂಕು ತಗುಲಿದೆ.
ಕಲಾದಗಿ ಗ್ರಾಮದ ಪಿ-8709 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ, 10 ವರ್ಷದ ಬಾಲಕಿ ಪಿ-25330 (ಬಿಜಿಕೆ-272), ಪಿ-15301 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ 60 ವರ್ಷದ ವೃದ್ದ ಪಿ-25331 (ಬಿಜಿಕೆ-273), 60 ವರ್ಷದ ವೃದ್ಧೆ ಪಿ-25332 (ಬಿಜಿಕೆ-274), 34 ವರ್ಷದ ಪುರುಷ ಪಿ-25333 (ಬಿಜಿಕೆ-275), ಬೆಂಗಳೂರಿನಿಂದ ಆಗಮಿಸಿದ ಬಾದಾಮಿ ತಾಲೂಕಿನ ಮಲ್ಲಾಪೂರ ಗ್ರಾಮದ 33 ವರ್ಷದ ಪುರುಷ ಪಿ-25334 (ಬಿಜಿಕೆ-276), ಪುಣೆಯಿಂದ ಆಗಮಿಸಿದ ಹುನಗುಂದ ತಾಲೂಕಿನ ಮನ್ಮಥನಾಳ ಗ್ರಾಮದ 11 ವರ್ಷದ ಬಾಲಕ ಪಿ-25335 (ಬಿಜಿಕೆ-277), ಗಟ್ಟಿಗನೂರ ಗ್ರಾಮದ 22 ವರ್ಷದ ಯುವತಿ ಪಿ-25336 (ಬಿಜಿಕೆ-278), 52 ವರ್ಷದ ಮಹಿಳೆ ಪಿ-25337 (ಬಿಜಿಕೆ-279) ಸೋಂಕು ದೃಢಪಟ್ಟಿದೆ.
ಉಸಿರಾಟದ ತೊಂದರೆಗೊಳಗಾದ ಬಾಗಲಕೋಟೆಯ ವಿದ್ಯಾಗಿರಿಯ 78 ವರ್ಷದ ವೃದ್ದೆ ಪಿ-25338 (ಬಿಜಿಕೆ-280), ಬೆಂಗಳೂರಿನಿಂದ ಆಗಮಿಸಿದ 27 ವರ್ಷದ ಯುವಕ ಪಿ-25339 (ಬಿಜಿಕೆ-281), ಪೆಸೆಂಟ್ ನಂಬರ ಬಿಜಿಕೆ-281, 283 ಸಂಪರ್ಕ ಹೊಂದಿದ 75 ವರ್ಷದ ವೃದ್ದ ಪಿ-25340 (ಬಿಜಿಕೆ-282), ಬೆಂಗಳೂರಿನಿಂದ ಆಗಮಿಸಿದ 52 ವರ್ಷದ ಪುರುಷ ಪಿ-25341 (ಬಿಜಿಕೆ-283), ಪೆಸೆಂಟ್ ನಂಬರ ಬಿಜಿಕೆ-281, 283 ಸಂಪರ್ಕ ಹೊಂದಿದ 46 ವರ್ಷದ ಪುರುಷ ಪಿ-25342 (ಬಿಜಿಕೆ-284), ಕೆಮ್ಮು, ನೆಗಡಿ, ಜ್ವರದ ಲಕ್ಷಣ ಹೊಂದಿದ 50 ವರ್ಷದ ಪುರುಷನಿಗೆ ಪಿ-25343 (ಬಿಜಿಕೆ-285) ಸೋಂಕು ದೃಢಪಟ್ಟಿದೆ.
ಗೋವಾದಿಂದ ಆಗಮಿಸಿದ ಬಾದಾಮಿ ತಾಲೂಕಿನ ಹಾನಾಪೂರ ಗ್ರಾಮದ ಮೃತಪಟ್ಟ 30 ವರ್ಷ ಪುರುಷ ಪಿ-25344 (ಬಿಜಿಕೆ-286) ಜಮಖಂಡಿಯ ಪಿ-10163 ಸೋಂಕಿತ ವ್ಯಕ್ತಿಯ ಪ್ರಾಥಮಿ ಸಂಪರ್ಕ ಹೊಂದಿದ ಜಮಖಂಡಿ ತಾಲೂಕಿನ ದರ್ಗಾ ನಗರದ 42 ವರ್ಷದ ಪುರುಷ ಪಿ-25345 (ಬಿಜಿಕೆ-287), ಬಾದಾಮಿ ಮಂಜುನಾಥ ನಗರದ ಪಿ-9153 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಅದೇ ನಗರದ 25 ವರ್ಷದ ಯುವಕ ಪಿ-25346 (ಬಿಜಿಕೆ-288), 58 ವರ್ಷದ ಪುರುಷ ಪಿ-25347 (ಬಿಜಿಕೆ-289) ಸೋಂಕು ದೃಢಪಟ್ಟಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1116 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 1082 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 15144 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 13642 ನೆಗೆಟಿವ್ ಪ್ರಕರಣ, 289 ಪಾಜಿಟಿವ್ ಪ್ರಕರಣ ಹಾಗೂ 7 ಜನ ಮೃತ ಪಟ್ಟಿದ್ದಾರೆ. ಕೋವಿಡ್-19 ದಿಂದ ಒಟ್ಟು 150 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 132 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 30 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. ಕಂಟೇನ್ಮೆಂಟ್ ಝೋನ್ 29 ಇದ್ದು, ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 3764 ಜನರನ್ನು ಬಿಡುಗಡೆ ಮಾಡಲಾಗಿದೆ.