ETV Bharat / state

ಪುನೀತ್​​ ದರ್ಶನ ಪಡೆಯಲು 650 ಕಿ.ಮೀ ಸೈಕಲ್​ ಯಾತ್ರೆ ಕೈಗೊಂಡ ಅಭಿಮಾನಿ - ಬಾಗಲಕೋಟೆ ಜಿಲ್ಲಾ ಸುದ್ದಿ

ಪುನೀತ್​ ರಾಜ್‌ಕುಮಾರ್​ (Puneeth Rajkumar) ಅಂತಿಮ ದರ್ಶನ ಪಡೆಯಲಾಗದ ಕಾರಣ ಸಮಾಧಿ ದರ್ಶನ ಪಡೆಯಲು ಮುಂದಾಗಿರುವ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ ಅಪ್ಪು ಅಭಿಮಾನಿಯಾದ ರಾಘವೇಂದ್ರ, ಸುಮಾರು 650 ಕಿ.ಮೀ ದೂರದಷ್ಟು ಸೈಕಲ್​​​ ಯಾತ್ರೆ ಕೈಗೊಂಡಿದ್ದಾರೆ.

bagalakote-puneeth-fans-started-cycle-rally-to-bangalore
ಸೈಕಲ್​ ಯಾತ್ರೆ
author img

By

Published : Nov 11, 2021, 5:17 PM IST

ಬಾಗಲಕೋಟೆ: ಪವರ್‌ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿಮಾನಿಯೊಬ್ಬ ಬೆಂಗಳೂರಿಗೆ ಸೈಕಲ್ ಯಾತ್ರೆ ಮಾಡುವ ಮೂಲಕ ಅಪ್ಪು ಸಮಾಧಿ ದರ್ಶನ ಪಡೆಯಲು ಮುಂದಾಗಿದ್ದಾರೆ.

ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ಅಪ್ಪಟ ಅಪ್ಪು ಅಭಿಮಾನಿ ರಾಘವೇಂದ್ರ ಗಾಣಗೇರ ಬೆಂಗಳೂರಿಗೆ ಸುಮಾರು 650 ಕಿ.ಮೀ ಸೈಕಲ್ ಯಾತ್ರೆ (Puneeth Rajkumar fan cycle rally) ಕೈಗೊಂಡಿದ್ದಾರೆ. ಬೆಂಗಳೂರಿಗೆ ತೆರಳುತ್ತಿರುವ ರಾಘವೇಂದ್ರ ಇಂದು ಇಲಕಲ್ಲ ನಗರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಅಪ್ಪು ಅಭಿಮಾನಿಗಳು ಹಾಗೂ ನಗರದ ಹಿರಿಯರು ಆದ ಮಹಾಂತಗೌಡ ತೊಂಡಿಹಾಳ ಹಾಗೂ ಇತರರು ಸ್ವಾಗತಿಸಿ ಸನ್ಮಾನಿಸಿದರು.

ಬೀಳಗಿ ಪಟ್ಟಣದಿಂದ ಬಾಗಲಕೋಟೆ, ಹುನಗುಂದ, ಇಲಕಲ್ಲ, ಹೊಸಪೇಟೆ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿದ್ದಾರೆ‌. ಪುನೀತ್ ಮೃತಪಟ್ಟಾಗ ಅವರ ಅಂತ್ಯಕ್ರಿಯೆಗೆ ಹೋಗಲು ಆಗಲಿಲ್ಲ. ಅದಕ್ಕಾಗಿ ಸೈಕಲ್ ಮೂಲಕ ಹೋಗಿ ಸಮಾಧಿಗೆ ಭೇಟಿ ನೀಡಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ರಾಘವೇಂದ್ರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.