ETV Bharat / state

ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನವಿಲ್ಲ: ಬೂಟ್ ಪಾಲಿಶ್​ ಚಳವಳಿ ಮಾಡಿದ ಕರವೇ - bagalakote district news

ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಕಾರ್ಯಕರ್ತರು ಇಂದು ಬಾಗಲಕೋಟೆ ನಗರದಲ್ಲಿ ತಹಶೀಲ್ದಾರ್ ಕಚೇರಿಗೆ ಬರುವ ಅಧಿಕಾರಿಗಳ ಬೂಟ್​ ಪಾಲಿಶ್​ ಮಾಡುವ ಮೂಲಕ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದ ಕ್ರಮವನ್ನು ಖಂಡಿಸಿದರು.

bagalakote-karave-boot-polish-protest
ಕರ್ನಾಟಕ ರಕ್ಷಣಾ ವೇದಿಕೆ
author img

By

Published : Nov 11, 2021, 4:29 PM IST

ಬಾಗಲಕೋಟೆ: ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದ ಕ್ರಮ ಖಂಡಿಸಿ ತಹಶೀಲ್ದಾರ್​ ಕಚೇರಿಗೆ ಬರುವ ಅಧಿಕಾರಿಗಳ ಬೂಟ್​ ಪಾಲಿಶ್​ ಮಾಡುವ ಮೂಲಕ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ರಮೇಶ್ ಬದನ್ನೂರು ನೇತೃತ್ವದಲ್ಲಿ ಕರವೇ 'ಬೂಟ್ ಪಾಲಿಶ್​​ ಚಳುವಳಿ' (Boot Polishing Movement) ಹಮ್ಮಿಕೊಂಡಿತ್ತು. ತಹಶೀಲ್ದಾರ್ ಸೇರಿದಂತೆ ಕಚೇರಿಗೆ ಬರುವ ಅಧಿಕಾರಿಗಳನ್ನು ತಡೆದು ಕಾಲಿಗೆ ಬಿದ್ದು ಬೂಟ್ ಪಾಲಿಶ್​​ ಮಾಡುವ ಮೂಲಕ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ನೀಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಮೇಶ್ ಬದನ್ನೂರು ಮಾತನಾಡಿ, ಹಣ ಇಲ್ಲ ಎಂದು ಕಾರ್ಯಾರಂಭ ಮಾಡದ ಸರ್ಕಾರದ ನಿಲುವು ಖಂಡಿಸಿ ಈ ರೀತಿ ಚಳವಳಿ ಮಾಡುತ್ತಿದ್ದೇವೆ. ಸರ್ಕಾರಕ್ಕೆ ನಾಚಿಗೆ ಬರಲಿ ಎಂದು ಇಂತಹ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಹಣ ಇಲ್ಲ ಎನ್ನುತ್ತಿರುವ ಸರ್ಕಾರಕ್ಕೆ ಶೂ ಪಾಲೀಶ್ ಮಾಡುವ ಮೂಲಕ ಹಣ ಸಂಗ್ರಹಿಸಿ ನೀಡಲು ಕರವೇ ತೀರ್ಮಾನ ಮಾಡಿದೆ. ಜಿಲ್ಲಾಡಳಿತ ಭವನಕ್ಕೆ ಬಂದ ಬಾದಾಮಿ ಮತ್ತು ಹುನಗುಂದ ತಹಶೀಲ್ದಾರ್ ಅವರ ಶೂಗಳನ್ನು ಸಹ ಪಾಲಿಶ್​ ಮಾಡಲಾಯಿತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.