ಬಾಗಲಕೋಟೆ: ಬಾದಾಮಿ ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೂತನಾಥ ದೇವಾಲಯ ಹಿಂದಿರುವ ಅಕ್ಕ-ತಂಗಿ ಫಾಲ್ಸ್ ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ಆಕರ್ಷಣೆ ಕೇಂದ್ರ ಬಿಂದುವಾಗಿದೆ.
ಚಾಲುಕ್ಯರ ಕಾಲದ ಸ್ಮಾರಕಗಳ ಹಾಗೂ ಪ್ರಕೃತಿ ಮಡಿಲಿನ ನಡುವೆ ಧುಮ್ಮಿಕ್ಕುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ನೀರು ಐತಿಹಾಸಿಕ ಅಗಸ್ತ್ಯ ತೀರ್ಥ ಕರೆಯಲ್ಲಿ ಶೇಖರಣೆಯಾಗುತ್ತಿದೆ.
ಈ ಜಲಪಾತ ವೀಕ್ಷಿಸಲು ಮಕ್ಕಳು, ಯುವಕರು, ಸ್ಥಳೀಯರ ದಂಡೇ ಬರುತ್ತದೆ. ಈ ಜಲಪಾತದ ಮನಮೋಹಕ ಸೌಂದರ್ಯವನ್ನು ಸವಿಯುತ್ತಾ ನಿಂತರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ನಮನ್ನು ಆಕರ್ಷಿಸುತ್ತದೆ. ಭಾರಿ ಮಳೆ ಸುರಿದಲ್ಲಿ ಅಗಸ್ತ್ಯ ತೀರ್ಥ ಕೆರೆಯೂ ತುಂಬಿ ಐತಿಹಾಸಿಕ ಗುಹಾಲಯ ಪಕ್ಕದ ರಸ್ತೆಯೇ ಮೇಲೆ ನೀರು ಹರಿಯಲಿದೆ.