ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧೆ ಮಾಡುವರು ಎನ್ನುವುದು ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಆದರೆ ಸಿದ್ದರಾಮಯ್ಯ ಯಾವ ಕ್ಷೇತ್ರ ಸೇಫ್ ಎಂಬ ಹುಡಕಾಟದಲ್ಲಿ ಇದ್ದಾರೆ. ಆದರೆ, ಸಿದ್ದರಾಮಯ್ಯನವರಿಗೆ ಸೇಪ್ ಇರುವುದು ಬಾದಾಮಿ ಮತಕ್ಷೇತ್ರ ಮಾತ್ರ ಎಂಬ ಸ್ಥಳೀಯ ವಿಶ್ಲೇಷಣೆಯೂ ಹೊರಬಿದ್ದಿದೆ. ಅಕಸ್ಮಾತ್ ಆಗಿ ಸಿದ್ದರಾಮಯ್ಯ ಬಾದಾಮಿ ಬಿಟ್ಟಿದ್ದಾದರೆ, ಜೆಡಿಎಸ್ ಪಕ್ಷಕ್ಕೆ ಈ ಭಾರಿ ಲಾಭ ಆಗಲಿದೆ ಎನ್ನುವುದನ್ನು ಹೊಸ ಸಮೀಕ್ಷೆಗಳು ಹೇಳುತ್ತಿವೆ.
ಬಾದಾಮಿ ಕ್ಷೇತ್ರ ಸಿದ್ದುಗೆ ಬೆಸ್ಟ್: ಬಾದಾಮಿ ಮತಕ್ಷೇತ್ರದ ಕುರುಬ ಸಮುದಾಯ,ಅಲ್ಪ ಸಂಖ್ಯಾತ ವಾಲ್ಮೀಕಿ ಹಾಗೂ ಲಿಂಗಾಯತ ಸಮುದಾಯ ದವರು ನಿರ್ಣಾಯಕ ಮತದಾರರು ಇದ್ದಾರೆ. ಹಿಂದಿನ ಸಲ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರಕ್ಕೆ ಸ್ಪರ್ಧಿಸಿದಾಗ, ಕ್ಷೇತ್ರದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಯಾವುದೇ ಕೆಲಸ ಸಹ ಮಾಡಿದ್ದಿಲ್ಲ.
ಈಗ ಸುಮಾರು 3 ಸಾವಿರ ಕೋಟಿಗೂ ಅಧಿಕ ಹಣ ತಂದು, ನಾನಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನೂ ಮಾಡಿದ್ದಾರೆ. ಈ ಕ್ಷೇತ್ರದಿಂದ ಮುಂದಿನ ಮುಖ್ಯಮಂತ್ರಿ ಆಗುವ ಬಗ್ಗೆ ಪ್ರಚಾರ ಮಾಡಲು ಕಾರ್ಯಕರ್ತರೆಲ್ಲ ಸಿದ್ದರಾಗಿದ್ದಾರೆ. ಹಿಂದಿನ ಸಲ ಬಿಜೆಪಿ ಪಕ್ಷದಿಂದ ಶ್ರೀರಾಮಲು ಪ್ರತಿಸ್ಪರ್ಧೆಯಾಗಿದ್ದರಿಂದ ವಾಲ್ಮೀಕಿ ಸಮುದಾಯ ಮತಗಳು ಕಾಂಗ್ರೆಸ್ ಗೆ ಅತಿ ಕಡಿಮೆ ಬಂದಿದ್ದವು. ವಾಲ್ಮೀಕಿ ಸಮುದಾಯದ ಮತ್ತೆ ಕಾಂಗ್ರೆಸ್ ಕಡೆಗೆ ನತ್ತ ವಾಲುವ ಸಾಧ್ಯತೆ ಹೆಚ್ಚಿದೆ. ಇದರ ಮಧ್ಯೆ ಇಡೀ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಪರ ಒಲವು ಜಾಸ್ತಿ ಇದೆ.
ಚಿಮ್ಮನಕಟ್ಟಿ ಸ್ಪರ್ಧೆ ಡೌಟು?ಇದರ ಮಧ್ಯೆಯೂ ಚಿಮ್ಮನಕಟ್ಟಿ ಕುಟುಂಬ ವಿರೋಧ ವ್ಯಕ್ತ ಪಡಿಸಿದೆ ಎಂಬ ಕಾರಣದಿಂದ ಸಿದ್ದರಾಮಯ್ಯನವರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಚಿಮ್ಮನಕಟ್ಟಿ ಅವರನ್ನು ಭೇಟಿ ಮಾಡಿ, ಅಧಿಕಾರಕ್ಕೆ ಬಂದಾಗ ಈ ಸಾರಿ ಏನಾದ್ರೂ ಮಾಡುತ್ತೇನೆ ಎಂದು ಭರವಸೆ ನೀಡಿದ್ರೆ ಸಾಕು, ಮತ್ತೆ ಒಂದಾಗಿ ಕೆಲಸ ಮಾಡುತ್ತಾರೆ ಎಂದು ಚಿಮ್ಮನಕಟ್ಟಿ ಆಪ್ತರೊಬ್ಬರು ತಿಳಿಸಿದ್ದಾರೆ.
ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಅವರು ಅನಾರೋಗ್ಯ ಇರುವುದರಿಂದ ಸ್ಪರ್ಧೆ ಮಾಡಿದರೂ ಹೆಚ್ಚಿನ ಬೆಂಬಲ ಸಿಗಲ್ಲ. ಪುತ್ರ ಭೀಮಸೇನೆ ಚಿಮ್ಮನಕಟ್ಟಿ ಅವರಿಗೆ ಇಡೀ ಕ್ಷೇತ್ರದಲ್ಲಿ ಮಾಸ ಲೀಡರ್ ಎಂದು ಗುರುತಿಸಿಕೊಂಡಿಲ್ಲ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳು ಇರುವುದು ಒಬ್ಬರಿಗೆ ಒಬ್ಬರೂ ಕಾಲು ಎಳೆಯವುದು ಸಾಮಾನ್ಯವಾಗಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ ಮಾತ್ರ ಕಳೆದ ಚುನಾವಣೆ ಗಿಂತಲೂ ಹೆಚ್ಚಿನ ಮತಗಳು ಪಡೆಯುತ್ತಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಬಿಜೆಪಿಗೆ ಕಷ್ಟ: ಸಿದ್ದರಾಮಯ್ಯ ಸ್ಪರ್ಧೆ ಮಾಡದಿದ್ದಲ್ಲಿ ನಾಲ್ವರು ಆಕಾಂಕ್ಷಿತರು ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಬಿಜೆಪಿ ಪಕ್ಷದಲ್ಲಿಯೂ ಸಹ ಸ್ಪರ್ಧೆ ಗಾಗಿ ಪೈಪೋಟಿ ಇದೆ. ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪೂರ ಹಾಗೂ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಎಸ್ ಟಿ ಪಾಟೀಲ ಅವರ ಮಧ್ಯೆ ಪೈಪೋಟಿ ಏರ್ಪಡಲಿದೆ. ಹೀಗಾಗಿ ಈ ಮೂವರ ತಿಕ್ಕಾಟದಿಂದ ಬಿಜೆಪಿ ಪಕ್ಷಕ್ಕೆ ನಷ್ಟ ಆಗಲಿದೆ.
ಸಿದ್ಧು ಸ್ಪರ್ಧಿಸದಿದ್ದರೆ ಜೆಡಿಎಸ್ಗೆ ಲಕ್ : ಹಿಂದಿನ ಚುನಾವಣೆಯಲ್ಲಿ 25 ಸಾವಿರ ಮತ ಪಡೆದು ಸೋಲು ಕಂಡಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಹನಮಂತ ಮಾವಿನಮರದ ನಂತರ ಸುಮ್ಮನೆ ಕೂಡ್ರದೆ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ನಿರಂತರ ಮಾಡುತ್ತಾ ಬಂದಿದ್ದಾರೆ.
ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡುತ್ತ, ಸಾಮಾನ್ಯರ ಮತದಾರರಿಗೆ ಭೇಟಿ ಆಗುವ ಕೆಲಸ ಮಾಡಿದ್ದಾರೆ. ಹನಮಂತ ಮಾವಿನಮರದ ಪಂಚಮಸಾಲಿ ಲಿಂಗಾಯತ ಸಮುದಾಯದವರು ಇದ್ದಾರೆ. ಜತೆಗೆ ಎಲ್ಲ ಸಮುದಾಯದೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ, ಒಂದು ವೇಳೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಾರದೇ ಇದ್ದಲ್ಲಿ ಜೆಡಿಎಸ್ ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಗಳು ಕಾಣುತ್ತಿವೆ.
ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತ ನೋಡಿದ ಬಾದಾಮಿ ಕ್ಷೇತ್ರದ ಜನತೆ ಈ ಯುವ ನಾಯಕನ ಮೇಲೆ ಹೆಚ್ಚು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ.
ಬನಶಂಕರಿ ದೇವಿ ಕೃಪೆ ಯಾರಿಗೆ ?: ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಚಾಮುಂಡಿ ದೇವಿ ಕೈ ಬಿಟ್ಟರೂ ಬಾದಾಮಿ ಬನಶಂಕರಿ ದೇವಿಯ ಆಶೀರ್ವಾದ ಫಲಿಸಿತು. ಬಾದಾಮಿ ಬನಶಂಕರಿ ದೇವಿಯ ಆಶೀರ್ವಾದ ಈ ಬಾರಿಯೂ ಸಿದ್ಧರಾಮಯ್ಯನವರ ಕೈ ಬಿಡಲಾರಳು. ಆದರೆ ಸಿದ್ದರಾಮಯ್ಯನವರಿಗೆ ಬಾದಾಮಿ ಕ್ಷೇತ್ರ ಬೆಂಗಳೂರ ನಿಂದ ದೂರಾಗುತ್ತದೆ.
ಜನತೆಗೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾದಾಮಿ ಕ್ಷೇತ್ರ ಬಿಡುವುದು ಬಹುತೇಕ ಖಚಿತವಾಗಿದೆ. ಮುಂದೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವರು ? ಮುಂದಿನ ರಾಜಕೀಯ ಬೆಳವಣಿಗೆಗಳು ದಿಢೀರ್ ಬದಲಾಗಲೂ ಬಹುದು ...ಮುಂದಿನ ಬಾರಿ ಬಾದಾಮಿ ಬನಶಂಕರಿ ಕೃಪೆ ಯಾರಿಗೆ ಒಲಿಯಲಿದೆ ಬರುವ ಕಾಲಘಟ್ಟವೇ ನಿರ್ಧರಿಸಲಿದೆ.
ಇದನ್ನೂ ಓದಿ:ಬಿಜೆಪಿ - ಕಾಂಗ್ರೆಸ್ ಅತೃಪ್ತ ನಾಯಕರಿಗೆ ಜೆಡಿಎಸ್ ಆಪರೇಷನ್: ಜಾರಕಿಹೊಳಿ ಬ್ರದರ್ಸ್, ಮುಸ್ಲಿಂ ಲೀಡರ್ಸ್ ಮೇಲೆ ಕಣ್ಣು