ETV Bharat / state

ಸರ್ಕಾರಿ ನೌಕರಿ ಬಿಟ್ಟು ರಾಜಕೀಯಕ್ಕೆ ಎಂಟ್ರಿ.. ಇವರು ತೇರದಾಳ ಮತಕ್ಷೇತ್ರದ ಆಪ್ ಅಭ್ಯರ್ಥಿ

ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆಗಿ ಅರ್ಜುನ ಹಲಗಿಗೌಡ ಅವರನ್ನು ಘೋಷಿಸಲಾಗಿದೆ. ಇವರು ಸರ್ಕಾರಿ ನೌಕರಿ ಬಿಟ್ಟು ಈಗ ರಾಜಕೀಯ ಮಾಡಲು ಮುಂದಾಗಿದ್ದಾರೆ.

Arjuna Halagi Gowda
ಆಪ್ ಅಭ್ಯರ್ಥಿ ಅರ್ಜುನ ಹಲಗಿಗೌಡ
author img

By

Published : Apr 19, 2023, 9:00 AM IST

ಆಪ್ ಅಭ್ಯರ್ಥಿ ಅರ್ಜುನ ಹಲಗಿಗೌಡ

ಬಾಗಲಕೋಟೆ: ಇವರು ಅರ್ಜುನ ಹಲಗಿಗೌಡ. ಪೊಲೀಸ್​ ಇಲಾಖೆಯ ಗುಪ್ತಚರ ವಿಭಾಗದಲ್ಲಿ​ 19 ವರ್ಷ 19 ದಿನಗಳ ಕಾಲ ಸೇವೆ ಸಲ್ಲಿಸಿ ಈಗ ರಾಜಕೀಯ ಅಖಾಡಕ್ಕೆ ಧುಮುಕಲು ಮುಂದಾಗಿದ್ದಾರೆ. ಸರ್ಕಾರಿ ಹುದ್ದೆ ತ್ಯಜಿಸುವ ಮೂಲಕ ಸಾಮಾಜಿಕ ಸೇವೆ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯ ತೇರದಾಳ ಮತ ಕ್ಷೇತ್ರದಿಂದ ಆಮ್​ ಅದ್ಮಿ ಪಕ್ಷದ ಹುರಿಯಾಳಾಗಿ ಅಖಾಡಕ್ಕಿಳಿದಿದ್ದಾರೆ.

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಡಳಿತಕ್ಕೆ ಮೆಚ್ಚಿ ಆಮ್ ಅದ್ಮಿ ಪಕ್ಷ ಸೇರಿಕೊಂಡು ತೇರದಾಳ ಮತಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಅರ್ಜುನ ಅವರು ರಬಕವಿ ಬನಹಟ್ಟಿ ನಿವಾಸಿ. ತೇರದಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆ ತಮ್ಮ ಸ್ವಕ್ಷೇತ್ರ ಎಂದು ಕಣಕ್ಕೆ ಇಳಿದಿದ್ದಾರೆ. ಅರ್ಜುನ ಹಲಗಿಗೌಡ ಈಗಾಗಲೇ ಎಲ್​​​ಎಲ್​​ಬಿ ಪದವಿ ಪಡೆದು ವಕೀಲ ವೃತ್ತಿಯನ್ನೂ ಪ್ರಾರಂಭಿಸಿದ್ದಾರೆ. ಇದರ ಜತೆಗೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಸದ್ಯ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು "ಪೊಲೀಸ್​ ಇಲಾಖೆಯಲ್ಲಿ ಇದ್ದರೆ ಸಾಮಾಜಿಕ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಬಂದಿದ್ದೇನೆ. ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಆಡಳಿತ, ಶಿಕ್ಷಣ, ಆರೋಗ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಿದ್ದೇನೆ. ನನ್ನ ಹತ್ತಿರ ಹಣದ ಬಲ ಇಲ್ಲ, ಜನರ ಬಲ ಇದೆ. ಈ ಬಾರಿ ಗೆಲುವು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಣ್ಯಗಳಲ್ಲೇ ಪಾವತಿಸಿದ ಆಮ್​ ಆದ್ಮಿ ಅಭ್ಯರ್ಥಿ: ರಾಣೆಬೆನ್ನೂರು ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷದಿಂದ ಸ್ಫರ್ಧಿಸುತ್ತಿರುವ ಹನುಮಂತಪ್ಪ ಕಬ್ಬಾರ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗಳಿಗೆ 10 ಸಾವಿರ ರೂಪಾಯಿ ಠೇವಣಿ ಇಡಬೇಕಿರುವುದು ನಿಯಮ. ಈ ಹತ್ತು ಸಾವಿರ ರೂಪಾಯಿ ಹಣವನ್ನು ಕಬ್ಬಾರ್ ಅವರು ನಾಣ್ಯದ ರೂಪದಲ್ಲಿಯೇ ತಂದಿದ್ದಾರೆ. ಈ ನಾಣ್ಯಗಳನ್ನು ಎಣಿಸಲು ಮುಂದಾದ ಚುನಾವಣಾಧಿಕಾರಿ ಸುಸ್ತಾಗಿ ಹೋದರು. ನಂತರ ತಮ್ಮ ಸಿಬ್ಬಂದಿಯನ್ನು ಕರೆಸಿ ನಾಣ್ಯ ಎಣಿಸಲು ಮುಂದಾದರು. ಆದರೂ ಎಣಿಕೆ ಮುಗಿಯದ ಕಾರಣ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್‌ಗೆ ನಾಮಪತ್ರ ಸಲ್ಲಿಸಲು ಅನುಮತಿ ನೀಡಿದ ಚುನಾವಣಾಧಿಕಾರಿಗಳು ಹಣದ ರಶೀದಿ ನೀಡಿ ಕಳುಹಿಸಿದ್ದಾರೆ. ನಂತರ ಬ್ಯಾಂಕ್ ಸಿಬ್ಬಂದಿಯನ್ನು ಕರೆಸಿ ಹಣ ಎಣಿಸಿಕೊಂಡಿದ್ದಾರೆ‌.

ಇದನ್ನೂ ಓದಿ: ₹10 ಸಾವಿರ ಠೇವಣಿಯನ್ನು ನಾಣ್ಯಗಳಲ್ಲೇ ಪಾವತಿಸಿದ ಆಮ್​ ಆದ್ಮಿ ಅಭ್ಯರ್ಥಿ- ವಿಡಿಯೋ

10 ಸಾವಿರ ಮೌಲ್ಯದ ನಾಣ್ಯಗಳನ್ನು ಪಾವತಿ: ಯಾದಗಿರಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಯಂಕಪ್ಪ ದೇವಿಂದ್ರಪ್ಪ ರಾಮಸಮುದ್ರ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದರು. ನಗರದ ತಹಶೀಲ್​​​ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ, ಚುನಾವಣಾ ಠೇವಣಿ ಹಣವಾಗಿ 10 ಸಾವಿರ ಮೌಲ್ಯದ ನಾಣ್ಯಗಳನ್ನು ಪಾವತಿ ಮಾಡಿದರು. ಈ ಠೇವಣಿ ಹಣ ಕಂಡು ಒಂದು ಕ್ಷಣ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಬಳಿಕ 4 ಜನ ಸಿಬ್ಬಂದಿ ನಾಣ್ಯಗಳನ್ನು ಎಣಿಕೆ ಮಾಡಿದರು. ಮೂಲತಃ ರಾಮಸಮುದ್ರ ಗ್ರಾಮದವರಾಗಿರುವ ಯಂಕಪ್ಪ ಎಂಎ ಪದವೀಧರ. ಸಮಾಜದಲ್ಲಿರುವ ಕೆಲವು ಅನಿಷ್ಟ ಪದ್ಧತಿಗಳನ್ನು ತೊಲಗಿಸಿ, ಸಮಾನತೆಯ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಯಾದಗಿರಿ ಮತಕ್ಷೇತ್ರದ ಹಳ್ಳಿಗಳಿಗೆ ಹಾಗೂ ತಾಂಡಾಗಳಿಗೆ ತೆರಳಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾಣ್ಯಗಳಲ್ಲೇ 10 ಸಾವಿರ ರೂ ಠೇವಣಿ ಪಾವತಿಸಿದ ಪಕ್ಷೇತರ ಅಭ್ಯರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.