ಬಾಗಲಕೋಟೆ: ಡ್ರಗ್ಸ್ ಮಾಫಿಯಾದಲ್ಲಿ ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಹೇಳಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ವಿನಾ ಕಾರಣ ಆರೋಪ ಮಾಡಲಾಗುತ್ತದೆ ಎಂದರು.
ಇದೇ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಪರಮೋಚ್ಚ ಅಧಿಕಾರ ನೀಡಿದ್ದು, ಅವರು ತೆಗೆದುಕೊಂಡ ನಿರ್ಣಯವೇ ಅಂತಿಮ ಎಂದರು. ಕೊರೊನಾ ಹಿನ್ನೆಲೆ ಇಲಾಖೆಗೆ ಆರ್ಥಿಕ ಹೂರೆ ಆಗಿದ್ದರೂ ಯಾವುದೇ ತೆರಿಗೆ ಕಡತ ಮಾಡಲ್ಲ. ಏಕೆಂದರೆ ಮಹಾನಗರ ಪಾಲಿಕೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅಗತ್ಯ ಇರುತ್ತದೆ ಎಂದರು.
ಬಾಗಲಕೋಟೆ ಮುಳಗಡೆ ನಗರವಾಗಿದ್ದು, ಮಹಾನಗರ ಪಾಲಿಕೆ ( ಬುಡಾ) ಮೇರ್ಲ್ದಜೆ ಏರಿಸುವಂತೆ ಶಾಸಕರು ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಆದೇಶ ಮಾಡಲಾಗುವುದು ಎಂದರು.