ETV Bharat / state

ಎಸ್​​​​​ಡಿಪಿಐ ಸಂಘಟನೆ ನಿಷೇಧಕ್ಕೆ ಶೀಘ್ರ ಕ್ರಮ: ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಪೊಲೀಸ್ ನಿರ್ಲಕ್ಷ್ಯ ಎಂದು ಆರೋಪಿಸುವವರು‌ ದೇಶ ದ್ರೋಹಿಗಳನ್ನು ಬೆಂಬಲಿಸಿದಂತೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

Deputy Chief Minister Govinda Karajola
ಡಿಸಿಎಂ ಗೋವಿಂದ ಕಾರಜೋಳ
author img

By

Published : Aug 15, 2020, 6:33 PM IST

ಬಾಗಲಕೋಟೆ: ಎಸ್​​​​​ಡಿಪಿಐ ಸಂಘಟನೆ ಬ್ಯಾನ್ ಮಾಡುವ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ನಂತರ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಗಲಭೆ ಪ್ರಕರಣ ದೇಶದ್ರೋಹಿ ಕೆಲಸ. ಪೊಲೀಸರು ತಮ್ಮ ಜೀವ ಒತ್ತೆ ಇಟ್ಟು ಉದ್ರಿಕ್ತರೊಂದಿಗೆ ಸೆಣಸಾಡಿ ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ ಎಂದರು.

ಪರಿಸ್ಥಿತಿ ಕೈ ಮೀರಿದಾಗ ಗುಂಡು ಹಾರಿಸಿದ್ದಾರೆ. ಪೊಲೀಸ್ ನಿರ್ಲಕ್ಷ್ಯ ಎಂದು ಆರೋಪಿಸುವವರು‌ ದೇಶ ದ್ರೋಹಿಗಳನ್ನು ಬೆಂಬಲಿಸಿದಂತೆ. ಸೂಕ್ತ ಸಾಕ್ಷಿಗಳನ್ನು ಸಂಗ್ರಹಿಸಿ ತಪ್ಪಿಸ್ಥರ ಮೇಲೆ ಕಠಿಣ ಶಿಕ್ಷೆ ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಡಿಸಿಎಂ ಗೋವಿಂದ ಕಾರಜೋಳ

ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಅವರಿಗೆ ಅಕ್ಕಲ್​ ದಾಲ್​​ (ಬುದ್ದಿ ಹಲ್ಲು) ಬಂದಿಲ್ಲ . ಹೀಗಾಗಿ ಅವರ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ಅಕ್ಕಲ್​ ದಾಲ್​ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಬುದ್ದಿ ಹಲ್ಲು ಎನ್ನುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.