ಬಾಗಲಕೋಟೆ: ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಇಡೀ ಕಟ್ಟಡ ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ನಡೆದಿದೆ.
ಇಲಕಲ್ಲ ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಸವೇಶ್ವರ ಸರ್ಕಲ್ ಎದುರಿನಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಸಜ್ಜನ್ ಶಾಪಿಂಗ್ ಸೆಂಟರ್ ಸಂಪೂರ್ಣ ಬೆಂಕಿಗಾಹುತಿಯಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಲಾಕ್ಡೌನ್ ನಂತರ ನೂತನ ಕಟ್ಟಡವನ್ನು ಪ್ರಾರಂಭಿಸಲಾಗಿತ್ತು. ಮಾಲ್ನಲ್ಲಿ ರೇಷ್ಮೆ, ಸಿಲ್ಕ್, ಹಾರ್ಡ್ವೇರ್ ಹಾಗೂ ಮೋರ್ ಸೇರಿದಂತೆ ಇತರ ಅಂಗಡಿಗಳು ಪ್ರಾರಂಭವಾಗಿತ್ತು.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಮಹೇಶಪ್ಪ ಸಜ್ಜನ್ ಅವರಿಗೆ ಸೇರಿದ ಈ ಕಾಂಪ್ಲೆಕ್ಸ್ ಬೆಂಕಿಯಿಂದ ಸಾಕಷ್ಟು ಹಾನಿಯಾಗಿದೆ. ಈ ಪ್ರಕರಣ ಇಲಕಲ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.