ETV Bharat / state

ಕಾರು ಮತ್ತು ಬಸ್​ ನಡುವೆ ಭೀಕರ ಅಪಘಾತ: ಮುಧೋಳ ಬಳಿ ನಾಲ್ವರು ದುರ್ಮರಣ

ಬಾಗಕೋಟೆ ಜಿಲ್ಲೆಯ ಶಿರೋಳ ಗ್ರಾಮದ ಬಳಿ ಬಸ್​ ಮತ್ತು ಕಾರ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Accident
ಅಪಘಾತವಅದ ಕಾರು
author img

By

Published : Jan 3, 2020, 10:01 AM IST

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಳಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಮಖಂಡಿ ತಾಲೂಕಿನ ಗೋಟೆ ಹಾಗೂ ಖಾಜಿಬಿಳಗಿ ಮೂಲದ ಸಿದ್ದರಾಯ ತೇಲಿ(36), ಬಾಲಪ್ಪ ಸೆಂಡಗಿ(34), ಹನಮಂತ ಗನಗಾರ(21) ಹಾಗೂ ರಿಯಾಜ್ ಜಾಲಗೇರಿ(25) ಮೃತರು. ಕಾರಿನಲ್ಲಿ ಈ ನಾಲ್ವರು ಧಾರವಾಡಕ್ಕೆ ತೆರಳುತ್ತಿದ್ದ ವೇಳೆ ಬೆಳಗಾವಿಯಿಂದ ಮುಧೋಳ ಮಾರ್ಗವಾಗಿ ಕಲಬುರಗಿಗೆ ತೆರಳುತ್ತಿದ್ದ ಬಸ್ ಕಬ್ಬಿನ ಟ್ರ್ಯಾಕ್ಟರ್​​ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಬ್ಬಿನ ಹಂಗಾಮು ಇರುವ ಕಾರಣದಿಂದಾಗಿ ಮುಧೋಳ, ಜಮಖಂಡಿ ಭಾಗದಲ್ಲಿ ಟ್ರ್ಯಾಕ್ಟರ್ ಗಳು ಕಬ್ಬು ತುಂಬಿಕೊಂಡು ಓಡಾಡುವುದು ಹೆಚ್ಚಾಗಿದೆ.

Intro:AnchorBody: ಬಾಗಲಕೋಟೆ --ಜಿಲ್ಲೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಳಿ ಬೆಳ್ಳಂ ಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕೆ.ಎಸ್ ಆರ್ ಟಿ ಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೆ ಮೃತ ಪಟ್ಟಿರುವ ಘಟನೆ ನಡೆದಿದೆ. ಜಮಖಂಡಿ ತಾಲೂಕಿನ ಗೋಟೆ ಹಾಗೂ ಖಾಜಿಬೀಳಗಿ ಮೂಲದ ಸಿದ್ದರಾಯ ತೇಲಿ(36), ಬಾಲಪ್ಪ ಸೆಂಡಗಿ(34), ಹನಮಂತ ಗನಗಾರ(21) ಹಾಗೂ ರಿಯಾಜ್ ಜಾಲಗೇರಿ(25) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕಾರಿಯಲ್ಲಿ ನಾಲ್ವರು ಧಾರವಾಡಕ್ಕೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿಯಿಂದ ಕಲಬುರಗಿಗೆ ಮುಧೋಳ ಮಾರ್ಗವಾಗಿ ಹೊರಟಿದ್ದ ಬಸ್, ಕಬ್ಬಿನ ವಾಹನ ಓವರ್ ಟೇಕ್ ಮಾಡುವ ವೇಳೆ ಕಾರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಕಬ್ಬಿನ ಹಂಗಾಮು ಇದ್ದಿದ್ದರಿಂದ
ಮುಧೋಳ, ಜಮಖಂಡಿ ಭಾಗದಲ್ಲಿ ಟ್ರ್ಯಾಕ್ಟರ್ ಗಳು ಕಬ್ಬು ತುಂಬಿಕೊಂಡು ಜಾಸ್ತಿ ಓಡಾಡುತ್ತವೆ. ಮೃತರ ಶವಗಳನ್ನ ಮುಧೋಳ ಶವಗಾರಕ್ಕೆ ಸಾಗಿಸಲಾಗಿದ್ದು, ಮೃತರ ಸಂಭಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.