ಬಾಗಲಕೋಟೆ: ಮುಧೋಳದ ರಾಯಣ್ಣ ಸರ್ಕಲ್ ಬಳಿ ಇರೋ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ, ವಿಲೇವಾರಿಯಾಗದೇ ಇರಿಸಿಕೊಂಡಿದ್ದ ನೇಮಕಾತಿ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿ ಅಂಗನವಾಡಿ ನೇಮಕಾತಿ ಆದೇಶ ತಡೆ ಹಿಡಿದುಕೊಂಡಿದ್ದ ಸಿಬ್ಬಂದಿ ಮೇಲೆ ದಾಳಿ ಚಾಟಿ ಬೀಸಲಾಗಿದೆ. ಈ ಸಂಬಂಧ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. 1 ವಾರದಿಂದ ನೇಮಕಾತಿ ಪತ್ರ ನೀಡದೇ ಪೆಂಡಿಂಗ್ ಉಳಿಸಿಕೊಂಡಿದ್ದ ಆರೋಪ ಇತ್ತು. ದಾಳಿ ವೇಳೆ 56 ಸಾವಿರ ಹಣ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: ಟ್ಯೂಷನ್ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ.. ಶಿಕ್ಷಕಿ ಮತ್ತು ಸ್ನೇಹಿತ ಅರೆಸ್ಟ್!
ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.