ಬಾಗಲಕೋಟೆ : ಮಹಿಳಾ ದಿನಾಚರಣೆ ದಿನವೇ ಆಂಬ್ಯುಲೆನ್ಸ್ನಲ್ಲೇ ಗರ್ಭಿಣಿಯೋರ್ವಳು ಅವಳಿ- ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಬಸವನಗರ ಎಲ್.ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಧನ್ಯಶ್ರೀ ಎಂಬುವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ತಕ್ಷಣಕ್ಕೆ ಸ್ಪಂದಿಸಿ ಸ್ಥಳಕ್ಕೆ ಧಾವಿಸಿದ ರಾಂಪೂರ ಗ್ರಾಮದ ಆಂಬ್ಯುಲೆನ್ಸ್ ಧನ್ಯಶ್ರೀಯನ್ನು ಬಸವನಗರದಿಂದ ಬಾಗಲಕೋಟೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಮಾರ್ಗ ಮಧ್ಯೆಯೇ ಹೆರಿಗೆ ನೋವು ಹೆಚ್ಚಾಗಿ ಆಂಬ್ಯುಲೆನ್ಸ್ ವಾಹನದಲ್ಲಿಯೇ ಹೆರಿಗೆಯಾಗಿದೆ.
ಅವಳಿ-ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಬಾಗಲಕೋಟೆ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋಗಲಾಗಿದೆ. ಆಂಬ್ಯುಲೆನ್ಸ್ನಲ್ಲಿದ್ದ ತುರ್ತು ವೈದ್ಯಕೀಯ ಸಿಬ್ಬಂದಿ ಹನಮಂತ ಮತ್ತು ಶಿವು ಎಂಬುವವರ ಸಹಾಯದಿಂದ ಗರ್ಭಿಣಿಗೆ ಸರಳ ಹೆರಿಗೆ ಮಾಡಿಸಲಾಗಿದೆ.