ಬಾಗಲಕೋಟೆ: ಶಿವರಾತ್ರಿ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳಲ್ಲಿ ಶಿವನ ಆರಾಧನೆ, ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಅನೇಕ ಪೂಜಾ ಕೈಂಕರ್ಯಗಳು ಸಾಗಿವೆ.
ನಗರದಲ್ಲಿರುವ ಕುಮಾರೇಶ್ವರ ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶಿವನ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಪುನಸ್ಕಾರಗಳನ್ನ ನೆರವೇರಿಸಿದರು. ಇನ್ನು ಇದೇ ಆವರಣದಲ್ಲಿ 12 ಜ್ಯೋತಿರ್ಲಿಂಗಗಳನ್ನ ಒಂದೇ ಕಡೆ ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜ್ಯೋತಿರ್ಲಿಂಗಗಳಿರುವ ಪುಣ್ಯಕ್ಷೇತ್ರಗಳಾದ, ಕೇದಾರನಾಥ, ಸೋಮನಾಥೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ಓಂಕಾರೇಶ್ವರ ಜ್ಯೋತಿರ್ಲಿಂಗ, ಸೇರಿದಂತೆ 12 ಜ್ಯೋತಿರ್ಲಿಂಗಗಳನ್ನು ಒಂದೇ ಕಡೆ ಪ್ರತಿಷ್ಠಾಪಿಸಿದ್ದು, ದೂರದ ಪುಣ್ಯಕ್ಷೇತ್ರಗಳಿಗೆ ಹೋಗಿ ದರ್ಶನ ಪಡಿಯೋಕೆ ಆಗದವರು ಇಲ್ಲಿ ಒಂದೇ ಕಡೆ ದರ್ಶನ ಪಡೆಯುವ ವ್ಯವಸ್ಥೆಯನ್ನ ಮಾಡಲಾಗಿದೆ.
ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಏರ್ಪಡಿಸಿದ್ದು, ಶಿವರಾತ್ರಿ ಜಾಗರಣೆ ಆರಂಭವಾಗಿದೆ.