ಬಾಗಲಕೋಟೆ: ಬಾದಾಮಿ ಪಟ್ಟಣದಲ್ಲಿ ತಾಲೂಕು ಮಟ್ಟದ 7ನೇ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ಜರುಗಿತು. ಸಮ್ಮೇಳನಧ್ಯಕ್ಷರಾಗಿದ್ದ ಖ್ಯಾತ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ಶೀಲಾಕಾಂತ ಪತ್ತಾರ ಅವರ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜರುಗಿತು. ವಿವಿಧ ಕಲಾ ತಂಡಗಳ ಹಾಗೂ ಜಾನಪದ ವಾದ್ಯಗೋಷ್ಠಿಗಳ ಮೂಲಕ ಮೆರವಣಿಗೆಯನ್ನು ನಡೆಸಲಾಯಿತು.
ವೀರಪುಲಕೇಶಿ ಕಾಲೇಜಿನ ಬಸವ ಮಂಟಪದಲ್ಲಿ ಸಮ್ಮೇಳನ ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ, ಸಂಸದ ಪಿ.ಸಿ. ಗದ್ದಿಗೌಡರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಡಾ. ಶೀಲಾಕಾಂತ ಪತ್ತಾರ ಮಾತನಾಡಿ, ಬಾದಾಮಿಯು ಕರ್ನಾಟಕದಲ್ಲಿ ಚಾಲುಕ್ಯರ ಕಾಲದಿಂದಲೂ ತನ್ನದೇ ಆದ ಇತಿಹಾಸ ಹೊಂದಿದೆ. ಆದರೆ ಇಂತಹ ಇತಿಹಾಸವನ್ನು ಉಳಿಸುವಲ್ಲಿ ರಾಜ್ಯದ ಜನತೆ ಹಾಗೂ ಜನಪ್ರತಿನಿಧಿಗಳ ಆಸಕ್ತಿ ಕಡಿಮೆಯಾಗುತ್ತಿದೆ. ತಮಿಳು, ತೆಲಗು ಸಾಹಿತ್ಯವಿರುವ ಸಂಗೀತವನ್ನು ಕರ್ನಾಟಕ ಬೆಳೆಸಿಕೊಂಡು ಬರುತ್ತಿದೆ ಎಂದರು.