ಬಾಗಲಕೋಟೆ: ಜಿಲ್ಲೆಯಲ್ಲಿ ದಿನ ಐವರಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಢಾಣಕಶಿರೂರ ಗ್ರಾಮದ ಓರ್ವ ಬಾಲಕ ಸೇರಿ ಆರು ಮಂದಿ ಕೋವಿಡ್ನಿಂದ ಗುಣಮುಖರಾಗಿ ಬಿಡುಗಡೆಯಾದರು.
ಜಿಲ್ಲಾ ಸಜ್ಜನ್ ಡಾ. ಪ್ರಕಾಶ ಬಿರಾದಾರ, ವೈದ್ಯ ಡಾ. ಚಂದ್ರಶೇಖರ ಜವಳಿ ಹಾಗೂ ಸಿಬ್ಬಂದಿ ಗುಣಮುಖರಾದವರಿಗೆ ಚಪ್ಪಾಳೆ ತಟ್ಟಿ, ಬಿಡುಗಡೆ ಪ್ರಮಾಣ ಪತ್ರ ನೀಡಿದರು. ಒಟ್ಟು 76 ಸೋಂಕಿತರ ಪೈಕಿ 37 ಮಂದಿ ಗುಣಮುಖರಾಗಿದ್ದಾರೆ. ಬಾಲಕನಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಪ್ರಮಾಣ ಪತ್ರ ಜೊತೆಗೆ ಡ್ರಾಯಿಂಗ್ ಪುಸ್ತಕವನ್ನೂ ವಿತರಿಸಿದರು.
ಡಿಸ್ಚಾರ್ಜ್ ಆದ ರೋಗಿಗಳು:
- ರೋಗಿ-680 (18 ವರ್ಷ, ಬಾಲಕಿ)
- ರೋಗಿ-681 (45 ವರ್ಷ, ಪುರುಷ)
- ರೋಗಿ-682 (55 ವರ್ಷ, ಮಹಿಳೆ)
- ರೋಗಿ-685 (30 ವರ್ಷ, ಮಹಿಳೆ)
- ರೋಗಿ-687 (40 ವರ್ಷ, ಮಹಿಳೆ)
- ರೋಗಿ-689 (10 ವರ್ಷ, ಬಾಲಕ)