ETV Bharat / state

ಭಾರತೀಯ ರೈಲ್ವೆಗೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​​ ಅಂಗಡಿ - bagalakote

ಭಾರತೀಯ ರೈಲ್ವೆಗೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನವಿದ್ದು, ಈ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಕರ್ನಾಟಕದ ಯುವ ಜನತೆ ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸಲಹೆ ನೀಡಿದರು.

ಭಾರತೀಯ ರೈಲ್ವೆಗೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ
author img

By

Published : Sep 7, 2019, 10:03 PM IST

ಬಾಗಲಕೋಟೆ: ಭಾರತೀಯ ರೈಲ್ವೆಗೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನವಿದ್ದು, ಈ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಕರ್ನಾಟಕದ ಯುವ ಜನತೆ ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸಲಹೆ ನೀಡಿದರು.

ಭಾರತೀಯ ರೈಲ್ವೆಗೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ: ಸಚಿವ ಸುರೇಶ್​ ಅಂಗಡಿ

ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಹಮ್ಮಿಕೊಂಡ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಬಾಕಿ ಉಳಿಸದೇ 2021-22ರಲ್ಲಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶ ಇದೆ. ಮುಂಬೈ ಹಾಗೂ ಶಿರಡಿಗೆ ಬಾದಾಮಿ ಮೂಲಕ ಸಂಚರಿಸುವ ರೈಲು ಬಾದಾಮಿಯಲ್ಲಿ ನಿಲುಗಡೆಯಾಗುತ್ತಿರಲಿಲ್ಲ. ಇದರಿಂದ ಐತಿಹಾಸಿಕ ಸ್ಥಳ ಬಾದಾಮಿ, ಪಟ್ಟದಕಲ್ಲು ಹಾಗೂ ಬನಶಂಕರಿ ದೇವಿಗೆ ಬರುವ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿತ್ತು. ನಾಳೆಯಿಂದಲೇ ಬಾದಾಮಿಯಲ್ಲಿ ರೈಲು ನಿಲುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬೆಳಗಾವಿ, ಗೋವಾ ಮಾರ್ಗವಾಗಿ ಹೆಚ್ಚಿನ ರೈಲು ಸಂಚಾರ ಪ್ರಾರಂಭಿಸಲಾಗಿದ್ದು, ದೇಶ ವಿದೇಶಗಳಿಂದ ದೂಧ್​ಸಾಗರ ವೀಕ್ಷಣೆ ಮಾಡಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಏಳು ದಿನ ಸಂಚಾರ ಮಾಡುವ ರೈಲು ಪ್ರಾರಂಭಿಸಲಾಗಿದೆ. ಬೆಳಗಾವಿ-ಬೆಂಗಳೂರು, ಬಾಗಲಕೋಟೆ-ಬೆಂಗಳೂರು, ಹೂಟಗಿ ಹಾಗೂ ಕುಡಚಿ ನೂತನ ರೈಲು ಮಾರ್ಗಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಇದಕ್ಕೆ ಬೇಕಾಗುವ ಜಮೀನು ಕೂಡಿಸುವುದಕ್ಕೆ ಶಾಸಕರು, ಸಂಸದರು ಪ್ರಯತ್ನ ಮಾಡಬೇಕು ಎಂದು ವಿನಂತಿಸಿಕೊಂಡಿರು.

Intro:AnchorBody:ಭಾರತೀಯ ರೈಲ್ವೆ ಇಲಾಖೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ
ಪಡೆದಿದೆ.ಇಂತಹ ಬೃಹತ್ ಇಲಾಖೆಗೆ ಸಾಕಷ್ಟು ಉದ್ಯೋಗವಕಾಶಗಳು ಇದ್ದು,ಕರ್ನಾಟಕ ಯುವ ಜನತೆ ಪರೀಕ್ಷೆಯನ್ನು ಬರೆಯುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳುವಂತೆ ಶ್ರಮವಹಿಸಬೇಕು ಎಂದು ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಮನವಿ ಮಾಡಿಕೊಂಡರು.
ಅವರು ಬಾಗಲಕೋಟೆ ನಗರಕ್ಕೆ ಸಚಿವರಾದ ಬಳಿಕ ಇದೇ ಮೊದಲು ಭಾರಿಗೆ ಭೇಟ್ಟಿ ನೀಡಿದ ಹಿನ್ನಲೆವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಾಣಿಜ್ಯೋದಮಿ
ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ರೇಲ್ವೆ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿಮಾತನಾಡಿದ ಅವರು ಕೇಂದ್ರ ಸರಕಾರ ರೇಲ್ವೆ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಬಾಕಿ ಉಳಿಸದೇ 2021-22 ರಲ್ಲಿ ಪೂರ್ಣಗೊಳಿಸುವ ಉದ್ದೇಶ ಹೂಂದಲಾಗಿದೆ ಎಂದು ತಿಳಿಸಿದ ಅವರು,ಬಾಂಬೆ ಹಾಗೂ ಶಿರಡಿಗೆ ಬಾದಾಮಿ ಮೂಲಕ ಸಂಚಾರಿಸುವ ರೈಲು ಬಾದಾಮಿ ಗೆ ನಿಲ್ಲುಗಡೆ ಇದ್ದಿಲ್ಲ.ಇದರಿಂದ ಐತಿಹಾಸಿಕ ಸ್ಥಳ ಬಾದಾಮಿ,ಪಟ್ಟದಕಲ್ಲು ಹಾಗೂ ಬನಶಂಕರಿ ದೇವಿಗೆ ಬರುವ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿತ್ತು.ಈ ಕ್ಷಣದಿಂದಲೇ ನಾಳೆಯಿಂದಲೇ ಬಾದಾಮಿ ಗೆ ನಿಲ್ಲುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮಾತನಾಡಿದ ಅವರು,ಬೆಳಗಾವಿ,ಗೋವಾ ಮಾರ್ಗವಾಗಿ ಹೆಚ್ಚಿನ ರೈಲು ಪ್ರಾರಂಭಿಸಲಾಗಿದ್ದು,ದೇಶ ವಿದೇಶಗಳಿಂದ ಧೂದಸಾಗರ ವೀಕ್ಷಣೆ ಮಾಡಲಿಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಏಳು ದಿನ ಸಂಚಾರ ಮಾಡುವ ರೈಲು ಪ್ರಾರಂಭಿಸಲಾಗಿದೆ.ಬೆಳಗಾವಿ-ಬೆಂಗಳೂರು,ಬಾಗಲಕೋಟೆ-ಬೆಂಗಳೂರು,ಹೂಟಗಿ ಹಾಗೂ ಕುಡಚಿ ನೂತನ ರೈಲು ಮಾರ್ಗಗಳಿಗೆ ಶೀಘ್ರವೇ ಪೂರ್ಣಗೊಳಿಸಲಾಗುವುದು ಇದಕ್ಕೆ ಬೇಕಾಗುವ ಜಮೀನು ಕೂಡಿಸುವುದಕ್ಕೆ ಶಾಸಕರು,ಸಂಸದರು ಪ್ರಯತ್ನ ಮಾಡಬೇಕು ಎಂದು ವಿನಂತಿಸಿಕೊಂಡಿರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ ಬಾಗಲಕೋಟೆ-ಕುಡಚಿ ರೇಲ್ವೆ
ಮಾರ್ಗ ಕೇವಲ 33 ಕಿ.ಮೀ ವರೆಗೆ ಮಾತ್ರ ಪ್ರಗತಿ ಸಾಧಿಸಲಾಗಿದೆ. ಇದಕ್ಕೆ ಭೂಸ್ವಾಧಿನ ಪ್ರಕ್ರಿಯೆವಿಳಂಬವಾಗುತ್ತಿವೆ. ರೈತರು ಸರಕಾರದ ಜೊತೆ ಕೈಜೋಡಿಸಿ ಜಮೀನು ಕೊಡಲು ಮುಂದೆ ಬಂದಲ್ಲಿ ಈ ಭಾಗದ ರೇಲ್ವೆ ಕಾಮಗಾರಿಗಳನ್ನು ಬೇಗನೇ ಪೂರ್ಣಗೊಳಿಸಲಾಗುವುದು ಎಂದರು.ಸಭೆಯ ಮುಂಚೆ ಬಾಗಲಕೋಟೆ ನಗರದ ರೈಲು ನಿಲ್ದಾಣಕ್ಕೆ ಭೇಟ್ಟಿ ನೀಡಿದ ಸಚಿವ ಸುರೇಶ ಅಂಗಡಿ ಅವರು,ರೈಲು ನಿಲ್ದಾಣದ ಸ್ವಚ್ಚತೆ,ನೂತನ ಕಾಮಗಾರಿಗಳು ಹಾಗೂ ಇತರ ವಿಷಯಗಳ ಬಗ್ಗೆ ರೈಲು ಇಲಾಖೆ ಹಿರಿಯ ಅಧಿಕಾರಿಗಳು,ಜಿಲ್ಲಾಧಿಕಾರಿ ಸೇರಿದಂತೆ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ಸಂಸದರಾದ ಪಿ.ಸಿ.ಗದ್ದಿಗೌಡರ ಅವರ ಜೊತೆಗೆ ಸಮಾಲೋಚನೆ ನಡೆಸಿದರು
ಕಾರ್ಯಕ್ರಮದಲ್ಲಿ ಕುಡಚಿ ಶಾಸಕ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ರೇಲ್ವೆಇಲಾಖೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್, ಹುಬ್ಬಳ್ಳಿ ರೇಲ್ವೆ ವಿಭಾಗದ ರಾಜೇಶ ಮೋಹನ,ಮುಖ್ಯ ಇಂಜೀನಿಯರ್ ಕೆ.ಸಿ.ಸ್ವಾಮಿ ಸೇರಿದಂತೆ ದನಂಜಯ ಸಿಂಗ್, ದಾಮೋದರ ರೆಡ್ಡಿಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಸ್ವಾಗತಿಸಿದರು. ನಂತರ ರೇಲ್ವೆ ಯೋಜನೆಗಳ ಕುರಿತು ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಹಾಗೂ ರೇಲ್ವೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಬೈಟ್--ಸುರೇಶ ಅಂಗಡಿ(ರೈಲು ಸಚಿವರು)
Conclusion:E TV,Bharar-Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.