ಬಾಗಲಕೋಟೆ: ಆಗಸ್ಟ್ ತಿಂಗಳಿನಲ್ಲಿ, ಚೀನಾ ದೇಶದಲ್ಲಿ 31ನೇ ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ವುಶು ಕ್ರೀಡಾಕೂಟ ನಡೆಯಲಿದೆ. ಈ ಹಿನ್ನೆಲೆ, ಭಾರತೀಯ ವಿಶ್ವವಿದ್ಯಾಲಯಗಳ ವುಶು ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆ ಫೆಬ್ರುವರಿ 24-25 ರಂದು ಚಂಡಿಘಡ ಯುನಿವರ್ಸಿಟಿ, ಮೊಹಾಲಿಯಲ್ಲಿ ನಡೆಯುತ್ತಿದೆ.
ಓದಿ: ಮಹಿಳಾ ಪೊಲೀಸ್ ಸಿಬ್ಬಂದಿಗೆ ರಿಲೀಫ್.. ಕುಟುಂಬಸ್ಥರೊಂದಿಗೆ ‘ಪೊಗರು’ ವೀಕ್ಷಿಸಿದ ಅಧಿಕಾರಿಗಳು..
ಈ ಕ್ರೀಡಾಕೂಟದ ಸಾನ್ ಶೌ ವಿಭಾಗದ ಕ್ರೀಡೆಗಳನ್ನು ಡಾ. ಅರವಿಂದರ ಸಿಂಗ್, ಡೈರೆಕ್ಟರ್ ಸ್ಟೂಡೆಂಟ್ ವೆಲ್ಫೇರ್, ಚಂಡಿಘಡ ಯುನಿವರ್ಸಿಟಿ, ಡಾ. ಪ್ರೀತಮ್ ಸಿಂಗ್, ಡೈರೆಕ್ಟರ್ ಸ್ಪೋರ್ಟ್ಸ್, ಸಂತ ಬಾಬಾ ಹಾಗೂ ಸಿಂಗ್ ಯುನಿವರ್ಸಿಟಿ, ಡಾ. ಮಹೇಶ್ ಜೇಟ್ಲಿ, ಚಂಡಿಘಡ ಯುನಿವರ್ಸಿಟಿ, ಡಾ. ತರಲೋಕ ಸಿಂಗ್ ಇತರ ಸದಸ್ಯರು ಉದ್ಘಾಟಿಸಿದರು.
ಆ. 18 ರಿಂದ 29 ವರೆಗೆ ಚೈನಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯೆಯಲ್ಲಿ, ಕರ್ನಾಟಕದಿಂದ ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಅನಿತಾ ಚೌವ್ಹಾಣ್, ಶಿವಮೊಗ್ಗದ ಕುಮಾರಿ ಸಭಾ ಟಸ್ಕೀನ್, ಕುಮಾರ್, ಮೋಹಮ್ಮದ ಇಬ್ರಾಹಿಂ ಇವರುಗಳು ಭಾಗಿಯಾಗಿರುತ್ತಾರೆ.
ರಾಜ್ಯ ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ವುಶು ನಿರ್ಣಾಯಕರಾದ ಅಶೋಕ ಮೋಕಾಶಿಯವರು ಸಹಾಯಕ ಮುಖ್ಯ ತೀರ್ಪುಗಾರರಾಗಿ ಕಾರ್ಯಹಿಸುತ್ತಿದ್ದಾರೆ.