ಬಾಗಲಕೋಟೆ : ಜಿಲ್ಲೆಯಲ್ಲಿ 80 ವರ್ಷದ ಅಜ್ಜಿ ಸೇರಿದಂತೆ ಮೂವರು ಮಾರಕ ಕೊರೊನಾದಿಂದ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಯಿತು.
ಬಿಡುಗಡೆಯಾದವರ ಪೈಕಿ ಈ 80ರ ಅಜ್ಜಿ ಗಮನ ಸೆಳೆದರು. ಅಜ್ಜಿಗೆ ವೈದ್ಯರು, ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 66 ಕ್ಕೆ ಏರಿಕೆಯಾಗಿದೆ. ಇನ್ನೂ 10 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಡಾಣಕಶಿರೂರ ಗ್ರಾಮದ 80 ವರ್ಷದ ವೃದ್ದೆ, ಮುಧೋಳದ 19 ವರ್ಷದ ಯುವಕ, ಕುಳಗೇರಿ ಕ್ರಾಸ್ನ 33 ವರ್ಷದ ಪುರುಷ ಗುಣಮುಖರಾಗಿ ಬಿಡುಗಡೆಯಾದವರು.
ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಪ್ರಮಾಣಪತ್ರ ವಿತರಣೆ ಮಾಡಿದರು. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1225 ಸ್ಯಾಂಪಲ್ಗಳ ಪೈಕಿ 619 ಸ್ಯಾಂಪಲ್ಗಳ ವರದಿ ನೆಗಟಿವ್ ಬಂದಿದೆ. 1033 ಜನರ ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ.