ಬಾಗಲಕೋಟೆ: ಕೊರೊನಾ ಸೋಂಕಿತರ ಪ್ರದೇಶವಾಗಿರುವ ಬಾಗಲಕೋಟೆಯ ಕೋವಿಡ್-19 ಜಿಲ್ಲಾ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಗುಣಮುಖರಾಗಿ ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಬಾಗಲಕೋಟೆಯ ದಂಪತಿ ಹಾಗೂ ಜಮಖಂಡಿಯ ಓರ್ವ ಪುರುಷ ಸೇರಿ ಮೂವರು ಗುಣಮುಖರಾಗಿದ್ದಾರೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
65 ವರ್ಷದ ಪುರುಷ ಪಿ- 367, 48 ವರ್ಷದ ಮಹಿಳೆ ಪಿ- 368 ಹಾಗೂ 47 ವರ್ಷದ ಪುರುಷ ಪಿ- 381 ಗುಣಮುಖರಾದವರು. ಕೋವಿಡ್ನಿಂದ ಗುಣಮುಖರಾದವರಿಗೆ ಜಿಲ್ಲಾ ಅಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದರು. ಅಲ್ಲದೇ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಗುಣಮುಖರಾದವರಿಗೆ ಪ್ರಮಾಣ ಪತ್ರ ನೀಡಿದರು. ನಂತರ ಗುಣಮುಖರಾದವರನ್ನು ಆ್ಯಂಬುಲೆನ್ಸ್ ಮೂಲಕ ಅವರ ಮನೆಗೆ ಕಳುಹಿಸಿ ಕೊಡಲಾಯಿತು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 33 ಸೋಂಕಿತರ ಸಂಖ್ಯೆ ಇದ್ದು, ಇದರಲ್ಲಿ ಓರ್ವ ಮೃತ ಪಟ್ಟಿದ್ದರೆ, 13 ಜನ ರೋಗದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.