ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು 14 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಗುಣಮುಖರಾದವರ ಸಂಖ್ಯೆ 137ಕ್ಕೆ ಏರಿದೆ.
ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಅದೇ ಪ್ರಮಾಣದಲ್ಲಿ ಇರುವುದು ಸಮಾಧಾನಕರ ಸಂಗತಿ. ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಪ್ರಮಾಣಪತ್ರ ವಿತರಿಸಿದರು. ಆಸ್ಪತ್ರೆ ಸಿಬ್ಬಂದಿ ಸೀಲ್ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಗುಣಮುಖರಾದವರು
- ರೋಗಿ ಸಂಖ್ಯೆ-8300, 29 ವರ್ಷದ ಯುವಕ, ಕಲಾದಗಿ ಗ್ರಾಮ
- ರೋಗಿ ಸಂಖ್ಯೆ-7952, 25 ವರ್ಷದ ಯುವತಿ, ಬೀಳಗಿ ತಾಲೂಕಿನ ಡವಳೇಶ್ವರ ಗ್ರಾಮ
- ರೋಗಿ ಸಂಖ್ಯೆ-8701, 06 ವರ್ಷದ ಬಾಲಕಿ, ಮುಧೋಳದ ಬಾಲಗರಗ
- ರೋಗಿ ಸಂಖ್ಯೆ-8702, 36 ವರ್ಷದ ಮಹಿಳೆ, ಮುಧೋಳ
- ರೋಗಿ ಸಂಖ್ಯೆ-8709, 50 ವರ್ಷದ ಮಹಿಳೆ
- ರೋಗಿ ಸಂಖ್ಯೆ-9153, 54 ವರ್ಷದ ಪುರುಷ, ಬಾದಾಮಿಯ ಮಂಜುನಾಥ ನಗರ
- ರೋಗಿ ಸಂಖ್ಯೆ-9155, 25 ವರ್ಷದ ಯುವಕ, ಗುಳೇದಗುಡ್ಡ
- ರೋಗಿ ಸಂಖ್ಯೆ-10158, 32 ವರ್ಷದ ಪುರುಷ, ಕಲಾದಗಿ ಗ್ರಾಮ
- ರೋಗಿ ಸಂಖ್ಯೆ-10159, 33 ವರ್ಷದ ಪುರುಷ
- ರೋಗಿ ಸಂಖ್ಯೆ-10160, 51 ವರ್ಷದ ಪುರುಷ
- ರೋಗಿ ಸಂಖ್ಯೆ-10157, 40 ವರ್ಷದ ಮಹಿಳೆ
- ರೋಗಿ ಸಂಖ್ಯೆ-10168, 20 ವರ್ಷದ ಯುವಕ
- ರೋಗಿ ಸಂಖ್ಯೆ-10161, 28 ವರ್ಷದ ಯುವತಿ, ಬನಹಟ್ಟಿ
- ರೋಗಿ ಸಂಖ್ಯೆ-10169, 19 ವರ್ಷದ ಯುವತಿ, ಮುಧೋಳ