ಬಾಗಲಕೋಟೆ : ಜಿಲ್ಲೆಯಲ್ಲಿ ಇಂದು 138 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ತಾಲೂಕುವಾರು ಕೊರೊನಾ ಸೋಂಕು ವಿವರ :
ಬಾಗಲಕೋಟೆ ತಾಲೂಕಿನಲ್ಲಿ 25, ಬಾದಾಮಿ 18, ಬೀಳಗಿ 3, ಹುನಗುಂದ 37, ಮುಧೋಳ 24 ಹಾಗು ಜಮಖಂಡಿ ತಾಲೂಕಿನಲ್ಲಿ 31 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ನಿಗದಿತ ಕೋವಿಡ್ ಆಸ್ಪತ್ರೆ ಮತ್ತು ಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ 12,523 ಸೋಂಕಿತ ಪ್ರಕರಣಗಳಿವೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರಿಷ್ಟು :
ಈ ದಿನ ಕೊರೊನಾದಿಂದ 79 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 11,470 ಮಂದಿ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ.
ಮೃತರ ಮಾಹಿತಿ :
ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕಿಗೆ 126 ಜನರು ಸಾವನ್ನಪ್ಪಿದ್ದಾರೆ.
ಸಕ್ರಿಯ ಪ್ರಕರಣಗಳು:
ಜಿಲ್ಲೆಯಲ್ಲಿ 927 ಸಕ್ರಿಯ ಪ್ರಕರಣಗಳಿಗೆ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.
ಕೋವಿಡ್ ಪರೀಕ್ಷೆ :
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 1,36,629 ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 1,22,299 ನೆಗೆಟಿವ್ ಪ್ರಕರಣ, 12,523 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೆ 413 ಸ್ಯಾಂಪಲ್‌ಗಳು ರಿಜೆಕ್ಟ್ ಆಗಿವೆ. ಜಿಲ್ಲೆಯಲ್ಲಿ 438 ಕಂಟೈನ್ಮೆಂಟ್ ಝೋನ್‌ಗಳಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.