ಲಂಡನ್: ಗ್ರೀಕ್ನ 21 ವರ್ಷದ ಸ್ಟೆಫನೋಸ್ ಸಿಟ್ಸಿಪಾಸ್ ಎಟಿಪಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಎಟಿಪಿ ಟೂರ್ನಿ ಗೆದ್ದ ವಿಶ್ವದ 5ನೇ ಕಿರಿಯ ಟೆನ್ನಿಸ್ ಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಸ್ಟೆಫನೋಸ್ ಸಿಟ್ಸಿಪಾಸ್ ಎಟಿಪಿ ಫೈನಲ್ ಪಂದ್ಯದಲ್ಲಿ ಆಸ್ಟ್ರೀಯಾದ ಡೊಮೆನಿಕ್ ಥೀಮ್ರನ್ನು 6-7 (6-8), 6-2, 7-6 (7-4) ರಲ್ಲಿ ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಸೆಮಿಫೈನಲ್ನಲ್ಲಿ ಲೆಜೆಂಡ್ ರೋಜರ್ ಫಡೆರರ್ರನ್ನು 6-3, 6-4ರ ನೇರ ಸೆಟ್ಗಳಲ್ಲಿ ಬಗ್ಗುಬಡಿದು ಫೈನಲ್ ಪ್ರವೇಶಿಸಿದ್ದರು.
ಸಿಟ್ಸಿಪಾಸ್ ಕೇವಲ 21 ವರ್ಷಕ್ಕೆ ಎಟಿಪಿ ಟ್ರೋಫಿ ಗೆದ್ದ ವಿಶ್ವದ 5ನೇ ಕಿರಿಯ ಆಟಗಾರ ಎನಿಸಿಕೊಂಡರು. ಇವರಿಗೂ ಮೊದಲು ಅಮೆರಿಕಾದ ಜಾನ್ ಮೆಕೆನ್ರೋ(19 ವರ್ಷ 11 ತಿಂಗಳು), ಪೇಟ್ ಸಾಂಪ್ರಸ್ ( 20 ವರ್ಷ 3 ತಿಂಗಳು), ಆ್ಯಂಡ್ರೆ ಅಗಸ್ಸಿ(20 ವರ್ಷ 3 ತಿಂಗಳೂ) ಹಾಗೂ ಜರ್ಮನಿಯ ಬೋರಿಸ್ ಬೆಕರ್(21 ವರ್ಷ, 13 ದಿನ) ಎಟಿಪಿ ಟ್ರೋಫಿ ಎತ್ತಿ ಹಿಡಿದಿದ್ದರು.
ಅಲ್ಲದೆ ಎಟಿಪಿ ಫೈನಲ್‌ನಲ್ಲಿ ಸತತ ನಾಲ್ಕನೇ ಬಾರಿ ಹೊಸಬರೇ ಚಾಂಪಿಯನ್ ಆಗಿದ್ದಾರೆ. 2016ರಲ್ಲಿ ಇಂಗ್ಲೆಂಡ್ನ ಆಂಡಿ ಮುರ್ರೆ, 2017ರಲ್ಲಿ ಬಲ್ಗೇರಿಯಾದ ಗ್ರೆಗರ್ ಡಿಮಿಟ್ರೋವ್ ಮತ್ತು 2019ರಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚೊಚ್ಚಲ ಚಾಂಪಿಯನ್ ಆಗಿದ್ದರು.