ಹಾಂಗ್ಕಾಂಗ್: ಭಾರತದ ಏಕಮಾತ್ರ ಆಟಗಾರನಾಗಿ ಹಾಂಗ್ಕಾಂಗ್ ಲೀಗ್ನಲ್ಲಿ ಉಳಿದಕೊಂಡಿತರುವ ಕಿಡಂಬಿ ಶ್ರೀಕಾಂತ್ ಆಡಿದ ಮೂರರ ಪೈಕಿ 2 ಪಂದ್ಯಗಳಲ್ಲಿ ಬೈ ಪಡೆದಿದ್ದಾರೆ.
ಭಾರತದ ಸ್ಟಾರ್ ಆಟಗಾರ ಕೆ.ಶ್ರೀಕಾಂತ್ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕೆಂಟೋ ಮೊಮೆಟೋ ಟೂರ್ನಿಗೆ ಭಾಗವಹಿಸಿದ ಹಿನ್ನೆಲೆಯಲ್ಲಿ ವಾಕ್ಓವರ್ ಪಡೆದಿದ್ದರು. ನಂತರ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಭಾರತದವರೇ ಆದ ಸೌರಭ್ ವರ್ಮರನ್ನು ಮಣಿಸಿ ಮೂರು ಸೆಟ್ಗಳ ಹೋರಾಟದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಇದೊಂದೇ ಪಂದ್ಯ ಅವರು ಪೂರ್ತಿಯಾಗಿ ಆಡಿದ್ದರು.
-
Kidambi Srikanth through to the semifinals as Chen Long unfortunately withdraws from the YONEX-SUNRISE Hong Kong Open 2019 🏸#HSBCBWFbadminton #HSBCRaceToGuangzhou pic.twitter.com/63PDJQYQsK
— BWF (@bwfmedia) November 15, 2019 " class="align-text-top noRightClick twitterSection" data="
">Kidambi Srikanth through to the semifinals as Chen Long unfortunately withdraws from the YONEX-SUNRISE Hong Kong Open 2019 🏸#HSBCBWFbadminton #HSBCRaceToGuangzhou pic.twitter.com/63PDJQYQsK
— BWF (@bwfmedia) November 15, 2019Kidambi Srikanth through to the semifinals as Chen Long unfortunately withdraws from the YONEX-SUNRISE Hong Kong Open 2019 🏸#HSBCBWFbadminton #HSBCRaceToGuangzhou pic.twitter.com/63PDJQYQsK
— BWF (@bwfmedia) November 15, 2019
ಇದೀಗ ಕ್ವಾರ್ಟರ್ ಫೈನಲ್ನಲ್ಲೂ ಚೀನಾದ ಚೆನ್ ಲಾಂಗ್ ಒಂದೇ ಗೇಮ್ ಆಡಿ ಗಾಯದಿಂದ ಹಿಂದೆ ಸರಿದಿದ್ದರಿಂದ ಶ್ರೀಕಾಂತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶ್ರೀಕಾಂತ್ ಚೆನ್ ಲಾಂಗ್ ವಿರುದ್ಧ ಮೊದಲ ಗೇಮ್ಅನ್ನು ಕೇವಲ 15 ನಿಮಿಷಗಳಲ್ಲಿ 21-13 ರಲ್ಲಿ ಗೆದ್ದುಕೊಂಡಿದ್ದರು. ಆದರೆ ಲಾಂಗ್ ದ್ವಿತೀಯ ಗೇಮ್ ಆಡದ ಕಾರಣ ಶ್ರೀಕಾಂತ್ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಹಾಂಗ್ಕಾಂಗ್ನ ಆಟಗಾರ ಲೀ ಚೆವುಕ್ ಯಿಯು ಅವರನ್ನು ಇಂದು ಎದುರಿಸಲಿದ್ದಾರೆ. ಶ್ರೀಕಾಂತ್ 2017ರಿಂದ ಶ್ರೀಕಾಂತ್ ಯಾವುದೇ ಬಿಡಬ್ಲೂಎಫ್ ಟೂರ್ನಮೆಂಟ್ ಗೆದ್ದಿಲ್ಲ. ಈ ವರ್ಷದಲ್ಲಿ ನಡೆದಿದ್ದ ಇಂಡಿಯನ್ ಓಪನ್ನಲ್ಲಿ ಮಾತ್ರ ಫೈನಲ್ ತಲುಪಿದ್ದರು.