ETV Bharat / sports

ನೀವು ನಮಗೆಲ್ಲರಿಗೂ ಸ್ಫೂರ್ತಿ: ಬೆಳ್ಳಿ ಗೆದ್ದ ಜಜಾರಿಯಾಗೆ ನೀರಜ್​ ಚೋಪ್ರಾ ಅಭಿನಂದನೆ - ಟೋಕಿಯೋ ಪ್ಯಾರಾಲಿಂಪಿಕ್ಸ್

ಸೋಮವಾರ ನಡೆದ ಪುರುಷರ ಎಫ್​46 ಜಾವಲಿನ್​ ಥ್ರೋ ಫೈನಲ್ಸ್​ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಗೆದ್ದರೆ ಮತ್ತೊಬ್ಬ ಭಾರತೀಯ ಸುಂದರ್​ ಸಿಂಗ್ ಗುರ್ಜಾರ್​ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

Neeraj Chopra to Devendra Jhajharia
ಜಜಾರಿಯಾಗೆ ನೀರಜ್ ಚೋಪ್ರಾ ಅಭಿನಂದನೆ
author img

By

Published : Aug 30, 2021, 4:39 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್​ ಚೋಪ್ರಾ ಇಂದು ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಪ್ಯಾರಾ ಜಾವಲಿನ್​ ಥ್ರೋವರ್​ ದೇವೇಂದ್ರ ಜಜಾರಿಯಾ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ನೀವು ನಮಗೆ ಸ್ಪೂರ್ತಿ ಎಂದು ಹೇಳಿದ್ದಾರೆ.

ಸೋಮವಾರ ನಡೆದ ಪುರುಷರ ಎಫ್​46 ಜಾವಲಿನ್​ ಥ್ರೋ ಫೈನಲ್ಸ್​ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಗೆದ್ದರೆ ಮತ್ತೊಬ್ಬ ಭಾರತೀಯ ಸುಂದರ್​ ಸಿಂಗ್ ಗುರ್ಜಾರ್​ ಕಂಚಿನ ಪದಕ ಪಡೆದಿದ್ದಾರೆ.

ದೇವೇಂದ್ರ ಸಾಹೇಬರೆ, ನಮಗೆ ನೀವು ಅತ್ಯುತ್ತಮ ಪ್ರೇರಣೆಯಾಗಿದ್ದೀರಿ. ನಿಮ್ಮ ಪ್ಯಾರಾಲಿಂಪಿಕ್ಸ್​ನ 3ನೇ ಪದಕಕ್ಕೆ ಅಭಿನಂದನೆಗಳು. ಕಂಚು ಗೆದ್ದಿರುವ ಸುಂದರ್​ ಅವರಿಗೂ ಅಭಿನಂದನೆಗಳು ಭಾಯ್​ ಎಂದು ನೀರಜ್​ ಚೋಪ್ರಾ ಟ್ವೀಟ್​ ಮೂಲಕ ಪ್ಯಾರಾ ಅಥ್ಲೀಟ್​ಗಳ ಸಾಧನೆಯನ್ನು ಕೊಂಡಾಡಿದ್ದಾರೆ.

ಜಜಾರಿಯಾ 64.35 ಮೀಟರ್​ ಎಸೆದು ಪ್ಯಾರಾಲಿಂಪಿಕ್ಸ್​ನಲ್ಲಿ 3ನೇ ಪದಕ ಪಡೆದರು. 2004 ಮತ್ತು 2016 ರ ಪ್ಯಾರಾಲಿಂಪಿಕ್ಸ್​ಗಳಲ್ಲಿ ಚಿನ್ನದ ಪದಕ ಪಡೆದಿದ್ದರು. ಸುಂದರ್​ 62.58 ಮೀಟರ್​ ಎಸೆದು ಕಂಚು ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.