ETV Bharat / sports

ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ XUV 700 ಕಾರು ಗಿಪ್ಟ್​ ಘೋಷಿಸಿದ ಆನಂದ್ ಮಹೀಂದ್ರಾ - ನೀರಜ್ ಚೋಪ್ರಾಗೆ ಚಿನ್ನದ ಪದಕ

ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಹರಿಯಾಣ ಸರ್ಕಾರ ನಗದು ಬಹುಮಾನ ಘೋಷಿಸಿದ್ದು, ಇದರ ಬೆನ್ನಲ್ಲೆ ಉದ್ಯಮಿ ಆನಂದ್ ಮಹೀಂದ್ರಾ ಅವರು XUV 700 ಎಂಬ ದುಬಾರಿ ಕಾರು ಗಿಪ್ಟ್​ ನೀಡುವುದಾಗಿ ಘೋಷಿಸಿ ಚಿನ್ನದ ಹುಡುಗನ ಬೆನ್ನು ತಟ್ಟಿದ್ದಾರೆ.

XUV 700 Car Gifted by Anand Mahindra To Indian Golden Man Neeraj Chopra
ನೀರಜ್ ಚೋಪ್ರಾ
author img

By

Published : Aug 7, 2021, 7:51 PM IST

Updated : Aug 7, 2021, 8:30 PM IST

ಟೋಕಿಯೋ: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನ ಪುರುಷರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ನೀರಜ್ ಚೋಪ್ರಾಗೆ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ.

XUV 700 Car Gifted by Anand Mahindra To Indian Golden Man Neeraj Chopra
ಉದ್ಯಮಿ ಆನಂದ್ ಮಹೀಂದ್ರಾ

ಚಿನ್ನದ ಪದಕವನ್ನು ಗೆದ್ದು ದೇಶದ ಕೀರ್ತಿಯನ್ನು ಎತ್ತಿಹಿಡಿದ ನೀರಜ್ ಚೋಪ್ರಾಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯವ್ಯಕ್ತಿಗಳು ಟ್ವೀಟ್​ ಮಾಡಿ ಅಭಿನಂದಿಸುತ್ತಿದ್ದಾರೆ.

XUV 700 Car Gifted by Anand Mahindra To Indian Golden Man Neeraj Chopra
ನೀರಜ್ ಚೋಪ್ರಾ

ಉದ್ಯಮಿ ಆನಂದ್ ಮಹೀಂದ್ರಾ ಕೂಡ ನೀರಜ್​ಗೆ XUV 700 ಎಂಬ ದುಬಾರಿ ಕಾರು ಗಿಫ್ಟ್​ ನೀಡುವುದಾಗಿ ಘೋಷಿಸುವ ಮೂಲಕ ಚಿನ್ನ ಗೆದ್ದು ದೇಶದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ ನೀರಜ್​ಗೆ ಶುಭಾಶಯ ಕೋರಿದ್ದಾರೆ. ಹೌದು, ನಮ್ಮ ಬಂಗಾರದ ಕ್ರೀಡಾಪಟುವಿಗೆ XUV 7OO ಕಾರು ಉಡುಗೊರೆಯಾಗಿ ನೀಡುತ್ತಿರುವುದು ನನಗೆ ಹೆಮ್ಮೆಯ ವಿಷಯ. ಆತನಿಗಾಗಿ ಈ ಕಾರನ್ನು ತಯಾರಿಸಿ ಎಂದು ಟ್ವೀಟ್​ ಮಾಡಿ ಚಿನ್ನದ ಹುಡುಗನ ಬೆನ್ನು ತಟ್ಟಿದ್ದಾರೆ.

23 ವರ್ಷದ ನೀರಜ್ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದರೆ ಮೂರನೇ ಪ್ರಯತ್ನದಲ್ಲಿ 76.79 ಮೀ.ಗಿಂತ ಕಡಿಮೆ ಎಸೆದಿದ್ದರು. ಇನ್ನು ಎರಡನೇ ಪ್ರಯತ್ನದಲ್ಲಿ ಎಲ್ಲರಿಗಿಂತಲೂ ಹೆಚ್ಚು ದೂರ ಭರ್ಚಿಯನ್ನು ಏಸೆದಿದ್ದರಿಂದ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಇನ್ನು ಸಾಧನೆಗೆ ಮೆಚ್ಚಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.

Last Updated : Aug 7, 2021, 8:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.