ಹಂಗೇರಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ವೀಸಾ ಸಮಸ್ಯೆಯಿಂದ ಮಂಗಳವಾರ ತಾವೂ ಟೋಕಿಯೋಗೆ ಪ್ರಯಾಣಿಸಬೇಕಾಗಿದ್ದ ವಿಮಾನವನ್ನು ತಪ್ಪಿಸಿಕೊಂಡಿದ್ದಾರೆ.
ಪ್ರಸ್ತುತ ಹಂಗೇರಿಯಲ್ಲಿ ತರಬೇತಿ ಪಡೆಯುತ್ತಿರುವ ಫೋಗಟ್ ಅಲ್ಲಿನ ಫ್ರಾಂಕ್‌ಫರ್ಟ್‌ನಿಂದ ಟೋಕಿಯೋಗೆ ಮಂಗಳವಾರ ಪ್ರಯಾಣಿಸಬೇಕಾಗಿತ್ತು. ಆದರೆ ವೀಸಾದ ಅವಧಿಯ ಮಂಗಳವಾರವೇ ಮುಗಿದಿದ್ದರಿಂದ ಸಮಸ್ಯೆಯುಂಟಾಗಿ ನಿಗದಿತ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಅನುಮತಿ ತಿರಸ್ಕರಿಸಲಾಗಿದೆ.
ತರಬೇತಿಗಾಗಿ ಹಂಗೇರಿಯಲ್ಲಿದ್ದ ವಿನೇಶ್ 90 ದಿನಗಳ ಯುರೋಪಿಯನ್ ವೀಸಾ ಹೊಂದಿದ್ದರು. ಆದರೆ ನಿಗದಿಯಾಗಿರುವ ದಿನಗಳಿಗಿಂತ ಒಂದು ದಿನ ಹೆಚ್ಚು ಉಳಿದುಕೊಂಡಿದ್ದೇ ಈ ಗೊಂದಲಕ್ಕೆ ಕಾರಣವಾಗಿದೆಯೆಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್‌ನ ಅಧಿಕಾರಿಯೊಬ್ಬರ ಪಿಟಿಐಗೆ ಮಾಹಿತಿ ನೀಡಿದ್ದಾರೆ.
SAI ಮಧ್ಯ ಪ್ರವೇಶ
ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಮಧ್ಯಪ್ರವೇಶಿಸಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ವಿನೇಶ್ ಅವರನ್ನು ಟೋಕಿಯೋಗೆ ಕಳುಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಬುಧವಾರ ವಿನೇಶ್ ಟೋಕಿಯೋಗೆ ಕೋಚ್ ಜೊತೆ ತೆರಳಲಿದ್ದಾರೆ.
ಇದನ್ನು ಓದಿ: ಭುಜದ ನೋವು ಮರೆತು ತೋಳ್ಬಲ ಪ್ರದರ್ಶಿಸಿ ಬೆಳ್ಳಿ ಗೆದ್ದ ಮಣಿಪುರದ ಕುವರಿ