ಟೋಕಿಯೊ(ಜಪಾನ್): ಪ್ಯಾರಾಲಿಂಪಿಕ್ಸ್ನ ಮೊದಲ ಪಂದ್ಯದಲ್ಲೆ ಭಾರತಕ್ಕೆ ನಿರಾಸೆಯಾಗಿದೆ. ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಸೋನಾಲ್ಬೆನ್ ಪಟೇಲ್ ಅವರು ಚೀನಾದ ಕಿಯಾನ್ ಲಿ ವಿರುದ್ಧ ಮಹಿಳಾ ಸಿಂಗಲ್ಸ್‌ನಲ್ಲಿ ಸೋಲು ಕಂಡಿದ್ದಾರೆ.
ವಿಶ್ವದ 4ನೇ ಶ್ರೇಯಾಂಕದಲ್ಲಿರುವ ಕಿಯಾನ್ ಲಿ ಅವರು ಸೋನಾಲ್ಬೆನ್ ಅವರನ್ನು 3-2 ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ. ಈಗ ಸೋನಾಲ್ಬೆನ್ ಎರಡನೇ ಗುಂಪಿನ ಡಿ ಪಂದ್ಯದಲ್ಲಿ ಗುರುವಾರ ದಕ್ಷಿಣ ಕೊರಿಯಾದ ಮಿ ಗಿಯು ಲೀ ವಿರುದ್ಧ ಸೆಣಸಲಿದ್ದಾರೆ.
ಮೊದಲ ಮತ್ತು ಮೂರನೇ ಸೆಟ್ ಅನ್ನು ಸೋನಾಲ್ಬೆನ್ ಗೆದ್ದ ಕಾರಣದಿಂದಾಗಿ ಪಂದ್ಯ ಕೊನೆಯವರೆಗೂ ರೋಚಕವಾಗಿ ಮುಂದುವರೆಯಿತು. ಆದರೆ ಕೊನೆಯ ಸೆಟ್ ಅನ್ನು 11-4 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಕಿಯಾನ್ ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಇಂದು ಇನ್ನೊಬ್ಬ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾಬೆನ್ ಪಟೇಲ್ ಮಹಿಳಾ ಸಿಂಗಲ್ಸ್ ಕ್ಲಾಸ್ 4ನ ಗ್ರೂಪ್ ಎ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಸಿರಾಜ್ಗೆ ಯಾವುದೇ ಹಂತದಲ್ಲಿ ಯಾವುದೇ ಬ್ಯಾಟ್ಸ್ಮನ್ರನ್ನು ಔಟ್ ಮಾಡುವ ಸಾಮರ್ಥ್ಯವಿದೆ : ವಿರಾಟ್ ಕೊಹ್ಲಿ