ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿರುವ ಜಪಾನ್‌ನ ಟೋಕಿಯೋದಲ್ಲಿ ಇಂದಿನಿಂದ ಪ್ಯಾರಾಲಿಂಪಿಕ್ಸ್ ಆರಂಭವಾಗಲಿದೆ. ಭಾರತೀಯ ಕಾಲಮಾನ ಸಂಜೆ 4.30ಕ್ಕೆ (ಜಪಾನ್ ಕಾಲಮಾನ ರಾತ್ರಿ 8.30)ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕ್ರೀಡಾಕೂಟದ ಪಥ ಸಂಚಲನದಲ್ಲಿ 163 ರಾಷ್ಟ್ರಗಳ ಕ್ರೀಡಾಪಟುಗಳು, ಅಧಿಕಾರಿಗಳು ಭಾಗವಹಿಸುತ್ತಿದ್ದು, ಭಾರತದಿಂದ 5 ಕ್ರೀಡಾಪಟುಗಳು ಸಂಚಲನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮರಿಯಪ್ಪನ್ ಬದಲಿಗೆ ಟೇಕ್ ಚಂದು ಭಾರತದ ಧ್ವಜಧಾರಿ
2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಭಾರತದ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ತಂಗವೇಲು ಅವರಿದ್ದ ವಿಮಾನದಲ್ಲಿ ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, ಅವರ ಬದಲಿಗೆ ಮತ್ತೊಬ್ಬ ಪ್ಯಾರಾಲಿಂಪಿಕ್ಸ್ ಪಟು ಟೇಕ್ ಚಂದು ಅವರು ಭಾರತದ ಧ್ವಜವನ್ನು ಹಿಡಿದು ಸಾಗಲಿದ್ದಾರೆ.
ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 15 ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ ತಂಡ
ಮರಿಯಪ್ಪನ್ ಅವರು ದೇಶದ ಧ್ವಜವನ್ನು ಹಿಡಿದು ಭಾರತದ ಕ್ರೀಡಾಪಟುಗಳನ್ನು ಮುನ್ನಡೆಸಬೇಕಿತ್ತು. ವಿಮಾನದಲ್ಲಿ ಕೋವಿಡ್ ಸೋಂಕಿತರ ಸಂಪರ್ಕ ಹಿನ್ನೆಲೆಯಲ್ಲಿ ಮಾರಿಯಪ್ಪ ಸ್ಥಾನದಲ್ಲಿ ಟೆಕ್‌ಚಂದು ಅವರು ಭಾರತವನ್ನು ಮುನ್ನಡೆಸಲಿದ್ದಾರೆ. ಮಾರಿಯಪ್ಪ ಇವೆಂಟ್‌ನಲ್ಲಿ ಭಾಗವಹಿಸಲು ಯಾವುದೇ ಅಡ್ಡಿ ಇಲ್ಲ ಎಂದು ಭಾರತದ ಪ್ಯಾರಾಲಿಂಪಿಕ್ಸ್ ಕೋಚ್ ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ. 32ನೇ ಪ್ಯಾರಾಲಿಂಪಿಕ್ ಕ್ರೀಡಾಕೂಟವು ಇಂದಿನಿಂದ ಸೆಪ್ಟೆಂಬರ್ 5 ರವರೆಗೆ ಟೋಕಿಯೋ ಮೆಟ್ರೋಪಾಲಿಟನ್ ಜಿಮ್ನಾಷಿಯಂನಲ್ಲಿ ನಡೆಯಲಿದೆ.