ಟೋಕಿಯೊ (ಜಪಾನ್): ಮಹಿಳೆಯರ 1,500 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಯುಎಸ್ನ ಕೇಟೀ ಲೆಡೆಕಿ ಮೊದಲ ಬಾರಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಕೇವಲ 15:37.34 ಸೆಕೆಂಡ್ನಲ್ಲಿ ಮುಗಿಸಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಇವರ ನಂತರದ ಸ್ಥಾನದಲ್ಲಿ ಜರ್ಮನಿಯ ಎರಿಕಾ ಸುಲ್ಲಿವಾನ್ ಮತ್ತು ಜರ್ಮನಿಯ ಸಾರಾ ಕೊಹ್ಲರ್ ಇದ್ದರು. ಶ್ರೇಷ್ಠ ಮಹಿಳಾ ಈಜುಗಾರ್ತಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಕೇಟೀ ಈಗ 6 ಒಲಿಂಪಿಕ್ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ 15 ಚಿನ್ನದ ಪದಕ ಗೆದ್ದಿದ್ದಾರೆ. ಇದು ಮಹಿಳಾ ಈಜುಗಾರರ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಪಡೆದ ಕ್ರೀಡಾಪಟು ಎನಿಸಿದ್ದಾರೆ.
ಇತ್ತ 200 ಮೀಟರ್ ಏಕ ವ್ಯಕ್ತಿ ಈಜುಸ್ಪರ್ಧೆಯಲ್ಲಿ ಜಪಾನ್ನ ಯುಯಿ ಒಹಾಶಿ ಕೇವಲ 2:08.52 ನಿಮಿಷದಲ್ಲಿ ಮೊದಲ ಸ್ಥಾನ ಅಲಂಕರಿಸಿ ಚಿನ್ನ ಪಡೆದುಕೊಂಡರೆ ಅಮೆರಿಕದ ಅಲೆಕ್ಸ್ ವಾಲ್ಸ್ ಮತ್ತು ಕೇಟ್ ಡೌಗ್ಲೌಸ್ ನಂತರದ ಎರಡು ಸ್ಥಾನಕ್ಕೆ ತೃಪ್ತಿ ಪಡೆದು ಕೊಂಡಿದ್ದಾರೆ.
ಜೊತೆಗೆ ಮಹಿಳೆಯರ 200 ಮೀಟರ್ ಈಜು ಸ್ಪರ್ಧೆಯ ಫ್ರೀಸ್ಟೈಲ್ ಫೈನಲ್ನಲ್ಲಿ ಆಸ್ಟ್ರೇಲಿಯಾದ ಅರಿಯಾರ್ನ್ ಟಿಟ್ಮಸ್ ಹೊಸ ದಾಖಲೆ ಬರೆದರು. 1:53.92 ನಿಮಿಷದಲ್ಲಿ ಗುರಿಮುಟ್ಟಿ ಒಲಿಂಪಿಕ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.