ETV Bharat / sports

Tokyo Olympics: ಮೊದಲ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಶಟ್ಲರ್ ಸಾಯಿ ಪ್ರಣೀತ್​ಗೆ ಸೋಲು - ಟೋಕಿಯೋ ಒಲಿಂಪಿಕ್ಸ್​ 2020

ಮೊದಲ ಸುತ್ತಿನಲ್ಲಿ ಅತ್ಯಂತ ಕಡಿಮೆ ಅಂದರೆ 3 ಪಾಯಿಂಟ್​ಗಳ ಅಂತರದಲ್ಲಿ ಪ್ರಣೀತ್ ಸೋಲು ಅನುಭವಿಸಿದ್ದು, ಎರಡನೇ ಸುತ್ತಿನಲ್ಲಿ ಸುಮಾರು 6 ಪಾಯಿಂಟ್​ಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

Tokyo Olympics: Sai Praneeth loses to Zilberman in 1st group stage game
Tokyo Olympics: ಮೊದಲ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಶಟ್ಲರ್ ಸಾಯಿ ಪ್ರಣೀತ್​ಗೆ ಸೋಲು
author img

By

Published : Jul 24, 2021, 12:49 PM IST

ಟೋಕಿಯೋ, ಜಪಾನ್: ಭಾರತೀಯ ಬಹುನಿರೀಕ್ಷಿತ ಶಟ್ಲರ್ ಸಾಯಿ ಪ್ರಣೀತ್​ ಟೋಕಿಯೋ ಒಲಿಂಪಿಕ್​​ನ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಇಸ್ರೇಲ್​ನ ಮಿಶಾ ಜಿಲ್ಬರ್ಮನ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.

ಟೋಕಿಯೋ ಕ್ರೀಡಾಗ್ರಾಮದ ಮುಸಾಶಿನೋ ಫಾರೆಸ್ಟ್ ಪ್ಲಾಜಾ ಕೋರ್ಟ್​ನಲ್ಲಿ 2ರಲ್ಲಿ ನಡೆದ ಗ್ರೂಪ್ ಡಿ ಪಂದ್ಯದಲ್ಲಿ ಜಿಲ್ಬರ್ಮನ್ ಪ್ರಣೀತ್ ಅವರನ್ನು 21-17, 21-15 ಸೆಟ್​​ಗಳಿಂದ ಸೋಲಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಅತ್ಯಂತ ಕಡಿಮೆ ಅಂದರೆ 3 ಪಾಯಿಂಟ್​ಗಳ ಅಂತರದಲ್ಲಿ ಪ್ರಣೀತ್ ಸೋಲು ಅನುಭವಿಸಿದ್ದು, ಎರಡನೇ ಸುತ್ತಿನಲ್ಲಿ ಸುಮಾರು 6 ಪಾಯಿಂಟ್​ಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಈ ದಿನದ ಅಂತ್ಯದೊಳಗೆ ಪುರುಷರ ಶಟ್ಲರ್​ನ ಡಬಲ್ಸ್​ನಲ್ಲಿ ಸ್ವಸ್ತಿಕ್ ಸಾಯಿ ರಾಜ್, ಚಿರಾಗ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Tokyo Olympics: ಟೇಬಲ್​ ಟೆನ್ನಿಸ್​ ಮಿಶ್ರ ಡಬಲ್ಸ್​ನಲ್ಲಿ ಭಾರತಕ್ಕೆ ಸೋಲು

ಭಾರತದ ಟೇಬಲ್ ಟೆನ್ನಿಸ್​​ನ ಮಿಶ್ರ ಡಬಲ್ಸ್​​ನ ಜೋಡಿಯಾದ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಅವರು ಚೀನಾದ ತೈಪೆ ತಂಡದ ಯುನ್ ಜು ಲಿನ್ ಮತ್ತು ಚೆಂಗ್ ವಿರುದ್ಧ ನಿರಾಸೆ ಅನುಭವಿಸಿದ್ದಾರೆ.

ಭಾರತದ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭ ಕಂಡಿದೆ. ಜುಡೋ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತದ ಏಕೈಕ ಜೂಡೋ ಆಟಗಾರ್ತಿ ಸುಶೀಲಾ ದೇವಿ ಸೋಲು ಕಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.