ಟೋಕಿಯೋ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದಾರೆ. ಜತೆಗೆ ಭಾರತ ಇದೀಗ ಮತ್ತೊಂದು ಪದಕದ ಸನಿಹಕ್ಕೆ ಹೋಗಿದೆ.
-
India's badminton ace @Pvsindhu1 enters #TokyoOlympics SF after defeating Japan's Akane Yamaguchi 21- 13 22-20#Badminton #Olympics #Cheer4India pic.twitter.com/ad1BXH4iTY
— SAIMedia (@Media_SAI) July 30, 2021 " class="align-text-top noRightClick twitterSection" data="
">India's badminton ace @Pvsindhu1 enters #TokyoOlympics SF after defeating Japan's Akane Yamaguchi 21- 13 22-20#Badminton #Olympics #Cheer4India pic.twitter.com/ad1BXH4iTY
— SAIMedia (@Media_SAI) July 30, 2021India's badminton ace @Pvsindhu1 enters #TokyoOlympics SF after defeating Japan's Akane Yamaguchi 21- 13 22-20#Badminton #Olympics #Cheer4India pic.twitter.com/ad1BXH4iTY
— SAIMedia (@Media_SAI) July 30, 2021
ಅಕಾನೆ ಯಮಗುಚಿ ವಿರುದ್ಧದ ಪಂದ್ಯದಲ್ಲಿ ಮೊದಲೆರಡು ಸೆಟ್ನಲ್ಲಿ 2-0 ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ಮುಂದಿನ ಹಂತಕ್ಕೆ ಲಗ್ಗೆ ಹಾಕಿದ್ದು, ಇದೀಗ ಭಾರತ ಮತ್ತೊಂದು ಪದಕಕ್ಕೆ ಸನಿಹವಾಗಿದೆ. ಇಂದಿನ ಪಂದ್ಯದಲ್ಲಿ ಎದುರಾಳಿ ವಿರುದ್ಧ 21-13, 22-20 ಗೇಮ್ಗಳ ಅಂತರದಿಂದ ಗೆಲುವು ದಾಖಲಿಸಿದರು. ಮೊದಲ ಗೇಮ್ನಲ್ಲಿ ಸುಲಭ ಗೆಲುವು ದಾಖಲು ಮಾಡಿದ ಸಿಂಧು, ಎರಡನೇ ಹಂತದಲ್ಲಿ ತುಸು ಹಿನ್ನಡೆ ಅನುಭವಿಸಿದರು. ಇದಾದ ಬಳಿಕ ಕಮ್ಬ್ಯಾಕ್ ಮಾಡಿ ಎದುರಾಳಿ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾದರು.
ಈ ಹಿಂದಿನ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಪಿವಿ ಸಿಂಧು ಡೆನ್ಮಾರ್ಕ್'ನ ಬ್ಲೆಚ್‌ಫೆಲ್ಡ್ 21-15, 21-13 ನೇರ ಗೇಮ್ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು.