ಟೋಕಿಯೋ: ಭಾರತದ ಈಜುಪಟು ಹಾಗೂ ಕನ್ನಡಿಗ ಶ್ರೀಹರಿ ನಟರಾಜ್ ಅವರ ಟೋಕಿಯೋ ಒಲಿಂಪಿಕ್ಸ್ ಅಭಿಯಾನ ಇಂದಿಗೆ ಮುಗಿದಿದೆ. 100 ಮೀಟರ್ ಬ್ಯಾಕ್ಸ್ಟ್ರೋಕ್ನ ಮೊದಲ ಹೀಟ್ನಲ್ಲಿ 6ನೇ ಸ್ಥಾನ ಪಡೆಯುವುದರೊಂದಿಗೆ ಮುಂದಿನ ಸುತ್ತಿಗೆ ತೇರ್ಗಡೆಯಾಗುವಲ್ಲಿ ಅವರು ವಿಫಲರಾದರು.
20 ವರ್ಷದ ಕರ್ನಾಟಕ ಈಜುಗಾರ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ 54.31 ಸೆಕೆಂಡ್ಗಳಲ್ಲಿ ತಲುಪಿದರು. ಹೀಟ್ಸ್ನಲ್ಲಿ 6ನೇ ಸ್ಥಾನ ಪಡೆದರೆ, ಒಟ್ಟಾರೆ 40 ಈಜುಪಟುಗಳಲ್ಲಿ 27ನೇ ಸ್ಥಾನ ಪಡೆದರು. ಸೆಮಿಫೈನಲ್ ಪ್ರವೇಶಿಸಲು ಟಾಪ್ 16 ಈಜುಗಾರರಿಗೆ ಮಾತ್ರ ಅವಕಾಶವಿದೆ.
ಶ್ರೀಹರಿ ಇಟಲಿಯಲ್ಲಿ ನಡೆದಿದ್ದ ಸೆಟ್ ಕೊಲ್ಲಿ ಟ್ರೋಪಿಯಲ್ಲಿ ಇದೇ ದೂರವನ್ನು 53.77 ಸೆಕೆಂಡ್ಗಳಲ್ಲಿ ಕ್ರಮಿಸಿದ್ದರು. ಅಷ್ಟು ಸಮಯಲ್ಲಿ ಟೋಕಿಯೋದಲ್ಲಿ ತಲುಪಿದ್ದರೆ ಸೆಮಿಫೈನಲ್ಗೆ ಅರ್ಹತೆ ಪಡೆಯಬಹುದಿತ್ತು.
ಮಹಿಳೆಯರ 100 ಮೀ: ಮನಾ ಪಟೇಲ್ಗೆ 39ನೇ ಸ್ಥಾನ
ಮಹಿಳೆಯರ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ 21 ವರ್ಷದ ಮನಾ ಪಟೇಲ್ ತಮ್ಮ ಹೀಟ್ನಲ್ಲಿ 2ನೇಯವರಾಗಿ ತಲುಪಿದರೂ, ಅದಕ್ಕೆ 1 ನಿಮಿಷ 5.2 ಸೆಕೆಂಡ್ ತೆಗೆದುಕೊಂಡರು. ಈ ಪ್ರದರ್ಶನದಲ್ಲಿ ಅವರು ಟಾಪ್ 16ಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಒಟ್ಟಾರೆ 6 ಹೀಟ್ಸ್ಗಳಲ್ಲಿ ಅವರು 39ನೇ ಸ್ಥಾನ ಪಡೆದರು.
ಇದನ್ನೂ ಓದಿ: Tokyo Olympics: ಟೇಬಲ್ ಟೆನ್ನಿಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದ ಭಾರತದ ಮನಿಕಾ ಬಾತ್ರಾ