ಟೋಕಿಯೋ: ಒಲಿಂಪಿಕ್ಸ್ನ ಮಹಿಳೆಯರ ಚಕ್ರ ಎಸೆತ(ಡಿಸ್ಕಸ್ ಥ್ರೋ) ಪಂದ್ಯದಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ನಿರಾಸೆ ಮೂಡಿಸಿದ್ದು, ಫೈನಲ್ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಪದಕ ವಂಚಿತರಾಗಿದ್ದಾರೆ. ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದ ಸಂದರ್ಭದಲ್ಲಿ 64.00 ಮೀಟರ್ ದೂರದವರೆಗೆ ಡಿಸ್ಕಸ್ ಥ್ರೋ ಮಾಡುವ ಮೂಲಕ ಅಂತಿಮ ಸುತ್ತು ಪ್ರವೇಶಿಸಿದ್ದ ಅವರು ಇದೀಗ 63.70 ದೂರ ಎಸೆಯುವ ಮೂಲಕ 6ನೇ ಸ್ಥಾನದಲ್ಲಿ ಉಳಿದುಕೊಂಡರು.
-
#Athletics Update
— SAIMedia (@Media_SAI) August 2, 2021 " class="align-text-top noRightClick twitterSection" data="
Kamalpreet Kaur makes it into the top 8 with the throw of 63.70m & moves into the final round#Cheer4India #DiscusThrow
">#Athletics Update
— SAIMedia (@Media_SAI) August 2, 2021
Kamalpreet Kaur makes it into the top 8 with the throw of 63.70m & moves into the final round#Cheer4India #DiscusThrow#Athletics Update
— SAIMedia (@Media_SAI) August 2, 2021
Kamalpreet Kaur makes it into the top 8 with the throw of 63.70m & moves into the final round#Cheer4India #DiscusThrow
ಈ ಕ್ರೀಡೆಯಲ್ಲಿ ಅಮೆರಿಕದ ವ್ಯಾಲರಿ ಆಲ್ಮನ್ 68.98 ಮೀಟರ್ ದೂರ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದು, ಜರ್ಮನಿಯ ಕ್ರಿಸ್ಟಿನ್ ಪುಡೆಂಜ್ 66.86 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಹಾಗೂ ಕ್ಯೂಬಾದ ಯೈಮ್ ಪೆರೆಜ್ 65.72 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದಾರೆ.
ಈಕ್ವೆಸ್ಟ್ರಿಯನ್ ಫೈನಲ್ನಲ್ಲಿ ಫೌವಾದ್ ಮಿರ್ಜಾ, ಸೀಗ್ನೂರ್ ಮೆಡಿಕಾಟ್ಗೆ ಸೋಲು
-
The #Equestrian Individual Eventing Jumping final comes to an end @FouaadMirza and #SeigneurMedicott finish 23rd
— SAIMedia (@Media_SAI) August 2, 2021 " class="align-text-top noRightClick twitterSection" data="
No medal here, but an inspirational performance from the duo this #Olympics
Great future ahead for them!#EquestrianEventing #Tokyo2020 #Cheer4India pic.twitter.com/URbJ3pdqqJ
">The #Equestrian Individual Eventing Jumping final comes to an end @FouaadMirza and #SeigneurMedicott finish 23rd
— SAIMedia (@Media_SAI) August 2, 2021
No medal here, but an inspirational performance from the duo this #Olympics
Great future ahead for them!#EquestrianEventing #Tokyo2020 #Cheer4India pic.twitter.com/URbJ3pdqqJThe #Equestrian Individual Eventing Jumping final comes to an end @FouaadMirza and #SeigneurMedicott finish 23rd
— SAIMedia (@Media_SAI) August 2, 2021
No medal here, but an inspirational performance from the duo this #Olympics
Great future ahead for them!#EquestrianEventing #Tokyo2020 #Cheer4India pic.twitter.com/URbJ3pdqqJ
ಈಕ್ವೆಸ್ಟ್ರಿಯನ್‌ನಲ್ಲಿ (ಕುದುರೆ ಸವಾರಿ) ಫೈನಲ್ ಪ್ರವೇಶಿಸಿದ ಕರ್ನಾಟಕದ ಫೌವಾದ್ ಮಿರ್ಜಾ ಹಾಗೂ ಸೀಗ್ನೂರ್ ಮೆಡಿಕಾಟ್ 23ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಮೂಲಕ ನಿರಾಸೆಗೊಳಗಾಗಿದ್ದಾರೆ. ಕುದುರೆ ಸವಾರಿ ಸಿಂಗಲ್ಸ್ನಲ್ಲಿ 8 ಪೆನಾಲ್ಟಿ ಅಂಕ ಪಡೆದುಕೊಳ್ಳುವ ಮೂಲಕ 47.20 ಸ್ಕೋರ್ ಗಳಿಸಿ ಈ ಅರ್ಹತೆ ಪಡೆದುಕೊಂಡಿದ್ದರು.