ಟೋಕಿಯೋ(ಜಪಾನ್) : ಭಾರತದ ಪರವಾಗಿ ಟೋಕಿಯೋ ಒಲಿಂಪಿಕ್ನ ಜುಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಏಕೈಕ ಸ್ಪರ್ಧಿ ಸುಶೀಲಾ ದೇವಿ ಲಿಕ್ಮಾಬಮ್ ಅವರು ಹಂಗೇರಿ ದೇಶದ ಇವಾ ಸೆರೊವಿಜ್ಕಿ ಅವರ ವಿರುದ್ಧ ಸೋಲನುಭವಿಸಿದ್ದಾರೆ.
ಮಹಿಳೆಯರ 48 ಕೆಜಿ ವಿಭಾಗದಲ್ಲಿ 32ನೇ ಎಲಿಮಿನೇಷನ್ ರೌಂಡ್ನಲ್ಲಿ ಸ್ಪರ್ಧಿಸಿದ ಅವರು ಟೋಕಿಯೋ ಕ್ರೀಡಾಗ್ರಾಮದ ನಿಪ್ಪಾನ್ ಬುಡೋಕಾನ್- ಮ್ಯಾಟ್-1ರಲ್ಲಿ ಸ್ಪರ್ಧೆ ನಡೆದಿದ್ದು, ಇವಾ ಸೆರೊವಿಜ್ಕಿ 10-0 ಅಂತರದಿಂದ ಗೆದ್ದಿದ್ದಾರೆ.
ಇವಾ ಸೆರೊವಿಜ್ಕಿ 2012ರ ಒಲಿಂಪಿಕ್ಸ್ನಲ್ಲಿ ಜುಡೋದಲ್ಲಿ ಕಂಚಿನ ಪದಕ ಗೆದ್ದಿದ್ದು, ಈ ಬಾರಿ ಚಿನ್ನದ ಪದಕ ಗೆಲ್ಲುವ ಉತ್ಸಾಹದೊಂದಿಗೆ ಒಲಿಂಪಿಕ್ಗೆ ಆಗಮಿಸಿದ್ದರು. ಸುಶೀಲಾ ದೇವಿ ವಿರುದ್ಧ 2.40ರಲ್ಲಿ ಇವಾ ಸೆರೊವಿಜ್ಕಿ ಅವರು ಇಪ್ಪೋನ್ (ಜುಡೋದಲ್ಲಿ ಒಂದು ಪೂರ್ಣ ಅಂಕ, ಇದನ್ನು ಪಡೆದವರು ಗೆದ್ದಂತೆ) ಪಡೆದರು.
ಮಂಗೋಲಿಯಾದ ಎನ್‌ಖ್‌ಸೆಟ್ಸೆಗ್ ಟರ್ಬತ್ ರೆಫರಿ ಇದ್ದು, ಇವಾ ಸೆರೊವಿಜ್ಕಿ ಅವರನ್ನು ವಿಜಯಶಾಲಿ ಎಂದು ಘೋಷಿಸಿದ್ದರು. ಹಂಗೇರಿಯಾದ ಇವಾ ಸೆರೊವಿಜ್ಕಿ ವಿಶ್ವ ಜುಡೋದಲ್ಲಿ 24ನೇ ರ್ಯಾಂಕ್ ಇದ್ದರೆ, ಸುಶೀಲಾ ದೇವಿ 46ನೇ ರ್ಯಾಂಕ್ನಲ್ಲಿದ್ದಾರೆ.
ಇದನ್ನೂ ಓದಿ: Tokyo Olympics: ಭಾರತೀಯ ಹಾಕಿ ತಂಡದ ಶುಭಾರಂಭ, ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಜಯ